Advertisement
ಮೂರು ಮಂದಿ ಸ್ಥಳೀಯ ನಿವಾಸಿಗಳ ಕೃಷಿ ಜಮೀನಿಗೆ ಸೇತುವೆ ನಿರ್ಮಾಣದಿಂದ ಹಾನಿಯಾಗಲಿರುವುದು ಸಮಸ್ಯೆಗೆ ಕಾರಣವಾಗಿದೆ. ತಕ್ಕ ಪರಿಹಾರ ದೊರೆತರೆ ಭೂಮಿ ಬಿಟ್ಟುಕೊಡುವುದಾಗಿ ಜಮೀನುದಾರರು ತಿಳಿಸಿದ್ದಾರೆ. 2.5 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಗುಂಡೂರಿಯಿಂದ ಹಕ್ಕೇರಿಗೆ ರಸ್ತೆ ನಿರ್ಮಾಣವಾಗುತ್ತಿದೆ. ಮೂರು ಮಂದಿ ಕೃಷಿಕರ ಸುಮಾರು190ರಷ್ಟು ಅಡಿಕೆ ಮರಗಳಿಗೆ ಸೇತುವೆ ನಿರ್ಮಾಣದಿಂದ ಕುತ್ತು ಬರಲಿದ್ದು, ಪರಿಹಾರ ಮೊತ್ತ ಯಾಚಿಸಿದ್ದಾರೆ.
ಸರ್ವೆ ಬಳಿಕ ಸೇತುವೆ ನಿರ್ಮಾಣದ ಬಗ್ಗೆ ಹಾಗೂ ವಶವಾಗುವ ಕೃಷಿ ಪ್ರದೇಶದ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಒಂದು ವೇಳೆ ಜಮೀನುದಾರರಿಗೆ ಪರಿಹಾರ ಮೊತ್ತ ನೀಡುವಲ್ಲಿ ವಿಫಲವಾದರೆ ಭಾರೀ ಮೊತ್ತದ ಯೋಜನೆ ಯೊಂದು ಗ್ರಾಮಸ್ಥರಿಂದ ಕೈತಪ್ಪಲಿದೆ. ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್, ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್. ಹುಲಿಮೇರು, ಸದಸ್ಯರಾದ ಶಶಿಧರ ಶೆಟ್ಟಿ, ಹರೀಶ್ ಕುಮಾರ್, ರಮೇಶ್ ಪೂಜಾರಿ, ಮುಖ್ಯಮಂತ್ರಿ ಸಡಕ್ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಜಯಾನಂದ ಅವರು ಭೇಟಿ ನೀಡಿ ಕೃಷಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.