ನವದೆಹಲಿ: ದೇಶದ ಹೆಣ್ಣು ಮಕ್ಕಳ ಸುರಕ್ಷೆಯೇ ನಮ್ಮ ಆದ್ಯತೆ. ಹಾಗೆಂದ ಮಾತ್ರಕ್ಕೆ ಪ್ರತಿ ಮದುವೆಯನ್ನು ಹಿಂಸಾತ್ಮಕವೆಂದು ಅಥವಾ ಪ್ರತಿ ಪುರುಷನನ್ನು ಅತ್ಯಾಚಾರಿಯೆಂದು ಖಂಡಿಸುವುದು ಸೂಕ್ತವಲ್ಲ. ಹೀಗೆಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ರಾಜ್ಯ ಸರ್ಕಾರಗಳ ಜತೆ ಸೇರಿಕೊಂಡು ಪ್ರತಿ ಹೆಣ್ಣಿನ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ.
ಈಗಾಗಲೇ ದೇಶಾದ್ಯಂತ 30 ಸಹಾಯವಾಣಿಗಳನ್ನು ರಚಿಸಲಾಗಿದ್ದು, ಅದರ ಮೂಲಕ 66 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಸಹಾಯ ಮಾಡಲಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಇಂದು 20,505 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 81 ಮಂದಿ ಬಲಿ
703 ಒನ್ ಸ್ಟಾಪ್ ಕೇಂದ್ರಗಳ ಮೂಲಕ 5 ಲಕ್ಷಕ್ಕೂ ಅಧಿಕ ಸ್ತ್ರೀಯರಿಗೆ ಸಹಾಯ ಮಾಡಲಾಗಿದೆ ಎಂದು ಸಚಿವೆ ಮಾಹಿತಿ ಕೊಟ್ಟರು.