Advertisement

Ayodhya ಕಾರ್ಯಕ್ರಮಗಳ ಪ್ರಸಾರಕ್ಕೆ ತಮಿಳುನಾಡಿನಲ್ಲಿ ನಿಷೇಧ: ನಿರ್ಮಲಾ ಆರೋಪ

09:30 PM Jan 21, 2024 | Team Udayavani |

ಚೆನ್ನೈ: ಅಯೋಧ್ಯಾ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭದ ವೇಳೆ ಕೇಂದ್ರ ಸರಕಾರ ಮತ್ತು ತಮಿಳುನಾಡು ಸರಕಾರದ ನಡುವೆ ತೀವ್ರ ಆರೋಪ, ಪ್ರತ್ಯಾರೋಪಗಳು ನಡೆದಿವೆ.

Advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಕ್ಸ್ ನಲ್ಲಿ ” ಅಯೋಧ್ಯೆಯ ಕಾರ್ಯಕ್ರಮಗಳ ನೇರ ಪ್ರಸಾರವನ್ನು ವೀಕ್ಷಿಸುವುದನ್ನು ತಮಿಳುನಾಡು ಸರಕಾರ ನಿಷೇಧಿಸಿದೆ. ಶ್ರೀರಾಮನಿಗೆ 200 ಕ್ಕೂ ಹೆಚ್ಚು ದೇವಾಲಯಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಯಾವುದೇ ಪೂಜೆ, ಭಜನೆ, ಪ್ರಸಾದ ಮತ್ತು ಅನ್ನದಾನ ನಡೆಸಲಾಗುತ್ತಿಲ್ಲ. ಶ್ರೀರಾಮನ ನಾಮಸ್ಮರಣೆಗೆ ಅವಕಾಶವಿಲ್ಲ.ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪೊಲೀಸರು ತಡೆಹಿಡಿಯುತ್ತಿದ್ದಾರೆ. ಪೆಂಡಾಲ್‌ಗಳನ್ನು ಕಿತ್ತುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ.ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸಿ” ಎಂದು ಪೋಸ್ಟ್ ಮಾಡಿದ್ದರು.

ತಮಿಳುನಾಡು ಸರಕಾರದ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ.ಶೇಖರ್ ಬಾಬು ತಿರುಗೇಟು ನೀಡಿದ್ದು, ”ಸೇಲಂನಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವ ಡಿಎಂಕೆ ಯುವ ಘಟಕದ ಸಮಾವೇಶವನ್ನು ದಿಕ್ಕು ತಪ್ಪಿಸಲು ಯೋಜಿತ ವದಂತಿ ಹಬ್ಬಿಸಲಾಗುತ್ತಿದೆ, ದತ್ತಿ ಇಲಾಖೆ ಭಕ್ತರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಶ್ರೀರಾಮನ ಹೆಸರಿನಲ್ಲಿ ಪೂಜೆ ಮಾಡಿ, ತಮಿಳುನಾಡಿನ ದೇವಸ್ಥಾನಗಳಲ್ಲಿ ಅನ್ನ, ಪ್ರಸಾದ ನೀಡಲೂ ಕೂಡ ಅವಕಾಶವಿದೆ. ಉನ್ನತ ಸ್ಥಾನದಲ್ಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಂತಹವರು ಸಂಪೂರ್ಣ ಅಸತ್ಯ ಮತ್ತು ಉದ್ದೇಶಪೂರ್ವಕ ಸುಳ್ಳನ್ನು ಹಬ್ಬಿಸುತ್ತಿರುವುದು ವಿಷಾದನೀಯ ಸಂದೇಶ. ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೊಂದೆಡೆ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕ ಓ ಪನ್ನೀರಸೆಲ್ವಂ ಅವರು ಅಯೋಧ್ಯೆ ರಾಮಮಂದಿರದ ಪ್ರಣಪ್ರತಿಷ್ಠೆಯಂದು ಸಾರ್ವಜನಿಕ ರಜೆ ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next