Advertisement

Tirupati ಭೇಟಿ; ಜಗನ್‌ vs ಚಂದ್ರಬಾಬು: ನನ್ನ ”ಧರ್ಮ” ಮಾನವೀಯತೆ

11:14 PM Sep 27, 2024 | Team Udayavani |

ಅಮರಾವತಿ: ವೈ.ಎಸ್‌.ಆರ್‌.ಪಿ. ನಾಯಕ ಜಗನ್‌ ಮೋಹನ್‌ ರೆಡ್ಡಿ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ವಿಷಯ ಸರಕಾರ ಮತ್ತು ವಿಪಕ್ಷದ ನಡುವೆ ವಾಗ್ಯು­ದ್ಧಕ್ಕೆ ಕಾರಣವಾಗಿದೆ. ನಾನು ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸಲು ಸರಕಾರ ನೋಟಿಸ್‌ ನೀಡಿದೆ ಎಂದು ಜಗನ್‌ ಆರೋಪಿಸಿದ್ದರೆ, ಯಾವುದೇ ನೋಟಿಸ್‌ ನೀಡಿಲ್ಲ. ಅವರ ಭೇಟಿಯನ್ನು ತಡೆಯಲು ಯತ್ನಿಸಿಲ್ಲ ಎಂದು ಚಂದ್ರಬಾಬು ಹೇಳಿದ್ದಾರೆ.

Advertisement

ಲಡ್ಡು ವಿವಾದದ ಬಳಿಕ ತಿರುಪತಿ ದೇವ ಸ್ಥಾನಕ್ಕೆ ಭೇಟಿ ನೀಡುವುದಾಗಿ ಜಗನ್‌ ಗುರು ವಾರ ಹೇಳಿದ್ದರು. ಆದರೆ ಕೊನೇಕ್ಷಣದಲ್ಲಿ ಈ ಭೇಟಿ ರದ್ದು ಮಾಡಿದ ಅವರು, ದೇವಸ್ಥಾನಕ್ಕೆ ಹೋಗುವುದನ್ನು ತಡೆ ಯಲು ರಾಜ್ಯ ಸರಕಾರ ದೇವಸ್ಥಾನದಲ್ಲಿ ಪೊಲೀ ಸ­ರನ್ನು ನಿಯೋಜನೆ ಮಾಡಿದೆ. ಅಲ್ಲದೇ ವೈಎಸ್‌ಆರ್‌ಪಿ ನಾಯಕರಿಗೆ ದೇವ ಸ್ಥಾ ನಕ್ಕೆ ಹೋಗದಂತೆ ನೋಟಿಸ್‌ ನೀಡಿದೆ ಎಂದಿದ್ದರು.

ಇದಕ್ಕೆ ತಿರುಗೇಟು ನೀಡುರುವ ಸಿಎಂ ನಾಯ್ಡು, ಎಲ್ಲ ಧರ್ಮಗಳಿಗೂ ತನ್ನದೇ ಆದ ನಂಬಿಕೆಗಳನ್ನು ಹೊಂದಿವೆ. ನಂಬಿಕೆಗಳಿ­ಗಿಂತ ಯಾರೂ ದೊಡ್ಡವರಲ್ಲ. ದೇವರನ್ನು ದೂಷಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ.

ಜಗನ್‌ ಮೋಹನ್‌ ರೆಡ್ಡಿ ತಿರುಪತಿಗೆ ಭೇಟಿ ನೀಡುವುದಾಗಿ ಘೋಷಿಸಿದ ಬಳಿಕ ಅದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ದೇವಸ್ಥಾನ ಭೇಟಿಗೂ ಮುನ್ನ ರೆಡ್ಡಿ ತಮ್ಮ ಧರ್ಮವನ್ನು ಘೋಷಣೆ ಮಾಡಬೇಕು ಎಂದು ಹೇಳಿತ್ತು.

ನನ್ನ ಧರ್ಮ ಮಾನವೀಯತೆ: ರೆಡ್ಡಿ
ನನ್ನ ಧರ್ಮ ಯಾವುದು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ನಾನು 4 ಗೋಡೆಗಳ ಮಧ್ಯೆ ಬೈಬಲ್‌ ಓದುತ್ತೇನೆ. ಆದರೆ ಹೊರಗೆ ಎಲ್ಲ ಧರ್ಮವನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ನನ್ನ ಧರ್ಮ ಮಾನವೀಯತೆಯಾಗಿದೆ ಎಂದು ಜಗನ್‌ ಮೋಹನ್‌ ರೆಡ್ಡಿ ಹೇಳಿದ್ದಾರೆ.

Advertisement

ಕಲಾಂ ತಿರುಪತಿಯಲ್ಲಿ ಧರ್ಮ ಘೋಷಿಸಿದ್ದರು!
ಭಾರತದ ರಾಷ್ಟ್ರಪತಿಯಾಗಿದ್ದ ಸಮಯದಲ್ಲಿ ತಿರುಮಲಕ್ಕೆ ಭೇಟಿ ನೀಡಿದ್ದ ಡಾ| ಎ.ಪಿ.ಜೆ.ಅಬ್ದುಲ್‌ ಕಲಾಂ ದೇವಸ್ಥಾನದ ನಿಯಮದಂತೆ ತಮ್ಮ ಧರ್ಮ ಘೋಷಣೆ ಮಾಡಿದ್ದರು. ಆದರೆ ಸೋನಿಯಾ ಗಾಂಧಿ ಧರ್ಮ ಘೋಷಣೆ ಮಾಡಲಿಲ್ಲ ಎಂಬ ವಿಷಯ ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next