Advertisement
ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಕೊಚ್ಚೆ ಆಗಿದ್ದರೆ ಅಷ್ಟು ವರ್ಷಗಳಿಂದ ಕೊಳಚೆ ಒಳಗಡೆ ಯಾಕಿದ್ದರು. ಅವರ ಇತಿಹಾಸ ಹೇಳುತ್ತಾ ಹೋದರೆ ದೊಡ್ಡದಿದೆ. ವಿಧಾನಸಭೆಯಲ್ಲಿ ಶೇ. 5ರಷ್ಟು ಹೇಳಿದ್ದೇನೆ. ಇನ್ನೂ ಶೇ. 95ರಷ್ಟು ಇದೆ. ನಾನು ಮಂತ್ರಿಯಾಗಿದ್ದೇನೆ. ಜನರು ನಮ್ಮಮೇಲೆ ಅಭಿಮಾನ ಇಟ್ಟುಕೊಂಡಿದ್ದಾರೆ. ಅವರಿಗೆ ಅಗೌರವವಾಗಿ ಬಾಯಿಗೆ ಬಂದಂತೆ ಮಾತನಾಡಲು ಸಾಧ್ಯವಿಲ್ಲ. ಆದ್ದರಿಂದ ಅವರಿಗೂ ಹೇಳಿ ಒಂದು ವೇದಿಕೆಯನ್ನು ನೀವೇ ಸೃಷ್ಟಿ ಮಾಡಿ ಚರ್ಚೆಗೆ ಬರಲಿ. ನಾನು, ಜಮೀರ್, ಬಾಲಕೃಷ್ಣ, ಪುಟ್ಟಣ್ಣ, ಭೀಮಾನಾಯಕ್ ಎಲ್ಲರೂ ಚರ್ಚೆ ಮಾಡುತ್ತೇವೆ. ಅಲ್ಲಿಯೇ ಯಾರು ಕೊಚ್ಚೆ, ಹೊಲಸು, ಕಚಡ ಎಂದು ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ನಾವು 1996ರಿಂದ 2016ರ ವರೆಗೆ ಜತೆಯಲ್ಲಿಯೇ ರಾಜಕಾರಣ ಮಾಡಿದ್ದೇವೆ. ಎದುರುಗಡೆಯೇ ಚರ್ಚೆಯಾಗಲಿ. ಅವರು ಉತ್ತರ ಕೊಡಲಿ, ನಾವೂ ಉತ್ತರ ಕೊಡುತ್ತೇವೆ ಎಂದು ಪಂಥಾಹ್ವಾನ ನೀಡಿದರು.