ನವದೆಹಲಿ: ರಾಜಸ್ಥಾನದ ಜೈಸಲ್ಮೇರ್ ನ ಸರ್ಕಾರಿ ಸ್ಥಳದಲ್ಲಿ ವಾಸವಾಗಿದ್ದ ಪಾಕಿಸ್ತಾನಿ ಹಿಂದೂ ವಲಸಿಗರ ಮನೆಗಳನ್ನು ಧ್ವಂಸಗೊಳಿಸುವಂತೆ ಆದೇಶ ಹೊರಡಿಸಿರುವ ಐಎಎಸ್ ಅಧಿಕಾರಿ ಟಿನಾ ಡಾಬಿ ವಿರುದ್ಧ ಭಾರತೀಯ ಜನತಾ ಪಕ್ಷ ಆಕ್ರೋಶ ವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Colombia Plane Crash: ಎರಡು ವಾರ ದಟ್ಟ ಕಾಡಿನಲ್ಲಿ ಅಲೆದಾಡಿ ಬದುಕುಳಿದ ನಾಲ್ವರು ಮಕ್ಕಳು
ಜೈಸಲ್ಮೇರ್ ಜಿಲ್ಲೆಯಿಂದ ಸುಮಾರು ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಅಮರ್ ಸಾಗರ್ ಪ್ರದೇಶದಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ ಹಿಂದೂಗಳು ಮಣ್ಣಿನ ಗುಡಿಸಲನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.
ಆದರೆ ಸರ್ಕಾರಿ ಜಾಗದಲ್ಲಿ ವಾಸವಾಗಿದ್ದ ಪಾಕ್ ವಲಸಿಗ ಹಿಂದೂಗಳ ಗುಡಿಸಲನ್ನು ಧ್ವಂಸಗೊಳಿಸುವಂತೆ ಜೈಸಲ್ಮೇರ್ ಜಿಲ್ಲಾಧಿಕಾರಿ ಟಿನಾ ಡಾಬಿ ಆದೇಶ ಹೊರಡಿಸಿದ್ದರು.
ಅಮರ್ ಸಾಗರ್ ಪ್ರದೇಶದಲ್ಲಿ ಸುಮಾರು 50ಕ್ಕೂ ಅಧಿಕ ಮಣ್ಣಿನ ಗುಡಿಸಲಿದ್ದು, 150ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಹಾಗೂ ಮಕ್ಕಳು ವಾಸವಾಗಿದ್ದರು. ಜಿಲ್ಲಾಧಿಕಾರಿ ಟಿನಾ ಅವರ ಆದೇಶದಂತೆ ಅಧಿಕಾರಿಗಳು ಬುಲ್ಡೋಜರ್ಸ್ಸ್ ಬಳಸಿ ಮನೆಗಳನ್ನು ಧ್ವಂಸಗೊಳಿಸಿದ್ದರು.
ಮನೆಗಳನ್ನು ಕಳೆದುಕೊಂಡು ನಿರ್ವಸಿತರಾದ ಪಾಕ್ ನ ವಲಸಿಗ ಹಿಂದೂಗಳು ಟಿನಾ ಡಾಬಿ ಕಚೇರಿ ಮುಂಭಾಗದಲ್ಲಿ ಟೆಂಟ್ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಯವರ ನಡೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಮತ್ತೊಂದೆಡೆ ಪಾಕಿಸ್ತಾನಿ ನಿರಾಶ್ರಿತ ಹಿಂದೂಗಳಿಗೆ ಭಾರತೀಯ ಪೌರತ್ವ ಇನ್ನೂ ಲಭಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ತಾತ್ಕಾಲಿಕ ಆಶ್ರಯ ಕಲ್ಪಿಸಿಕೊಡಬಹುದು. ಆದರೆ ಇದಕ್ಕೆ ಸಮಯ ತಗುಲಲಿದೆ ಎಂದು ಜಿಲ್ಲಾಧಿಕಾರಿ ಟಿನಾ ಡಾಬಿ ತಿಳಿಸಿರುವುದಾಗಿ ವರದಿಯಾಗಿದೆ.