Advertisement

ಸಿಎ ಎನ್‌. ಬಿ. ಶೆಟ್ಟಿ ಅವರಿಗೆ 2020ನೇ ಸಾಲಿನ “ಟೈಮ್ಸ್‌ ಮೆನ್‌ ಆಫ್‌ ದ ಈಯರ್‌ ಪುರಸ್ಕಾರ’

09:08 PM Feb 08, 2021 | Team Udayavani |

ಮುಂಬಯಿ: ನಗರದ ಲೆಕ್ಕ ಪರಿಶೋಧಕ, ಫೈನಾನ್ಶಿಯಲ್‌ ಕನ್ಸಲ್ಟೆಂಟ್‌ ಸಿಎ ಎನ್‌. ಬಿ. ಶೆಟ್ಟಿ ಅವರು ಪ್ರತಿಷ್ಠಿತ 2020ನೇ ಸಾಲಿನ “ಟೈಮ್ಸ್‌ ಮೆನ್‌ ಆಫ್‌ ದ ಈಯರ್‌ ಪುರಸ್ಕಾರ’ ಕ್ಕೆ ಭಾಜನರಾಗಿದ್ದಾರೆ.

Advertisement

ಮಹಾನಗರದಲ್ಲಿ ಜರಗಿದ ಸಮಾರಂಭದಲ್ಲಿ ಬಾಲಿವುಡ್‌ ಪ್ರಸಿದ್ಧ ಗಾಯಕಿ ಇಲಾ ಅರುಣ್‌ ಪುರಸ್ಕಾರ ಫಲಕವನ್ನು ಸಿಎ ಎನ್‌. ಬಿ. ಶೆಟ್ಟಿ ಅವರಿಗೆ ಪ್ರದಾನ ಮಾಡಿ, ಗೌರವಿಸಿ ಅಭಿನಂದಿಸಿದರು. ಆರ್ಥಿಕ ರಾಜಧಾನಿ ಮುಂಬಯಿಯ ಬಾಂದ್ರಾ ಪಶ್ಚಿಮದ ವಿಲ್‌ರೋಡ್‌ನ‌ಲ್ಲಿ ಲೆಕ್ಕ ಪರಿಶೋಧಕ
ರಾಗಿ ಮತ್ತು ಫೈನಾನ್ಶಿಯಲ್‌ ಕನ್ಸಲ್ಟೆಂಟ್‌ ಸಂಸ್ಥೆ ಹೊಂದಿರುವ ಅವರು ಸುಮಾರು 5 ದಶಕಗಳ ಅಗಾಧ ಜ್ಞಾನ, ಸುದೀರ್ಘ‌ ಅನುಭವಸ್ಥವುಳ್ಳ ಪ್ರತಿಷ್ಠಿತ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿ ಹೆಸರುವಾಸಿಯಾಗಿದ್ದಾರೆ. ತ್ರಿವೇಣಿ ಗ್ರೂಫ್‌ ಹಾಸ್ಪಿಟಾಲಿಟಿ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಅವರು ಉದ್ಯಮಿ ಯಾಗಿ, ಮಚೆ‌ìಂಟ್‌, ಬ್ಯಾಂಕಿಂಗ್‌, ಮ್ಯಾನೇಜ್‌ಮೆಂಟ್‌ ಕನ್ಸಲ್ಟೆನ್ಸಿ ಸರ್ವಿಸಸ್‌ ಮತ್ತು ಇನ್ಫೋಟೆಕ್‌ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಉಡುಪಿ ಬೊಮ್ಮಾರಬೆಟ್ಟು ನಿವಾಸಿ, ಕೃಷಿಕರಾದ ಕರಿಯ ಶೆಟ್ಟಿ ಮತ್ತು ಜಲಜಾ ಶೆಟ್ಟಿ ಹಿರಿಯಡ್ಕ ದಂಪತಿ ಪುತ್ರರಾಗಿರುವ ಇವರು ಸರಳ, ಸಜ್ಜನ ವ್ಯಕ್ತಿತ್ವದ ಮಿತಭಾಷಿಯಾಗಿ, ತೆರೆಮರೆಯ ಸಮಾಜ ಸೇವಕರಾಗಿ ಹೆಸರು ಗಳಿಸಿದ್ದಾರೆ. ಜಾತಿ, ಮತ, ಧರ್ಮವನ್ನು ಮರೆತು ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಒಳನಾಡ ಮತ್ತು ಹೊರನಾಡ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಇನ್ನಿತರ ಸೇವಾ ಸಂಸ್ಥೆಗಳ ಪ್ರೋತ್ಸಾಹಕರಾಗಿದ್ದಾರೆ. 1970ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ (ಸಿಎ) ಪದೋನ್ನತಿಯಾಗಿ ರಾಷ್ಟ್ರದಲ್ಲೇ ಹನ್ನೊಂದನೇ ರ್‍ಯಾಂಕ್‌ ಪಡೆದ ಅವರಿಗೆ ವಿವಿಧ ಕ್ಷೇತ್ರಗಳ ಸಾಧನೆಗಳಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. 2020ರಲ್ಲಿ ಎಸ್‌ಎಂಇ ಎಂಟರ್‌ಪ್ರಿನರ್‌ಶಿಪ್‌ ಎಕ್ಸ್‌ಲೆನ್ಸ್‌ ಪುರಸ್ಕಾರಕ್ಕೂ ಭಾಜನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next