Advertisement

UV Fusion: ಸಮಯದ ಸದುಪಯೋಗ ಅತೀ ಮುಖ್ಯ

11:51 AM Oct 02, 2023 | Team Udayavani |

ಸಮಯವೂ ಎಲ್ಲರ ಜೀವನದಲ್ಲಿ ಆಟವಾಡುವುದು ಸಹಜ. ಸರಿಯಾದ ಸಮಯ ಬರಲು ಎಲ್ಲರೂ ಕಾಯಲೇಬೇಕು. ಆದರೆ ಕೆಲವೊಮ್ಮೆ ಸಮಯ ಕೂಡಿಬಂದರು ಆ ಕೆಲಸವನ್ನು ಪೂರೈಸಲು ನಮಗೆ ಸಾಧ್ಯವಾಗಲ್ಲ.

Advertisement

ಎಷ್ಟೋ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದಲು ತಿಂಗಳಾನುಗಟ್ಟಲೆ ಸಮಯವಿರುತ್ತದೆ. ಆದರೆ ಇನ್ನೂ ಅಷ್ಟೆಲ್ಲ ಟೈಮ್‌ ಇದೆ, ನಾಳೆ ಓದಿ ಮುಗ್ಸಿದ್ರೆ ಆಯ್ತು, ಆರಾಮಾಗಿ ಓದಿ ಮುಗಿಸಬಹುದು. ಅಂತ ಸಮಯದ ವ್ಯಯ ಮಾಡಿ, ಪರೀಕ್ಷೆ ಹತ್ತಿರ ಬಂದಕ್ಷಣ ಎದ್ದು ಬಿದ್ದು ಓದಿ ಮುಗಿಸಲೇಬೇಕೆಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ಕುಳಿತರೆ ಅದು ಸಾಧ್ಯವಾಗಲ್ಲ. ಇರುವ ಸಮಯದಲ್ಲೇ ಓದಿದ್ರೆ ಹೀಗಾಗ್ತಾ ಇರ್ಲಿಲ್ಲ ಅಂತ ಆಮೇಲೆ ಎಷ್ಟೋ ವಿದ್ಯಾರ್ಥಿಗಳಿಗೆ ಮನವರಿಕೆ ಆಗೋದಂತೂ ನಿಜ.

ಇನ್ನೊಂದು ಸ್ವಲ್ಪ ಓದಿದ್ರೆ  ಪಾಸಾಗ್ತಿದ್ದೆ, ಪಸ್ಟ್‌ ಕ್ಲಾಸ್‌ ಬರ್ತಿದ್ದೆ ಅಂತ ತುಂಬಾ ವಿದ್ಯಾರ್ಥಿಗಳು ಆಮೇಲೆ ದುಃಖಪಡ್ತಾರೆ. ಅದ್ರೆ ಕೈಯ್ಯಾರೆ ಅವರೇ ಮಾಡಿಕೊಂಡಿರೋ ತಪ್ಪು ಇದು.

ಇನ್ನೂ ಕೆಲ ಜನರು ಕೆಲಸದ ವಿಷಯದಲ್ಲೂ ಇದೆ ರೀತಿಯ ತಪ್ಪನ್ನು ಮಾಡ್ತಾರೆ. ಇವತ್ತು ಮಾಡಬೇಕಾದ ಕೆಲಸವನ್ನು ನಾಳೆ ಮಾಡಿದ್ರೆ ಆಯ್ತು ಅಂತ ಉಳಿಸಿಕೊಳ್ತಾರೆ. ಹೀಗಾದಾಗ ಇವತ್ತಿನ ಕೆಲಸ ಮಾಡಿ ಮುಗಿಸೋದೆ ಕಷ್ಟ ಆಗಿರತ್ತೆ. ಅದ್ರ ಜತೆ ನಿನ್ನೆ ಉಳಿಸಿಕೊಂಡಿರೋ ಕೆಲಸವನ್ನು ಮಾಡಿ ಮುಗಿಸಬೇಕು ಅಂದ್ರೆ ಅದು ಅಸಾಧ್ಯಾನೇ.

ನಿನ್ನೆ ಮಾಡಬೇಕಾಗಿರೋದನ್ನ ನಿನ್ನೇನೆ ಮುಗಿಸಿದ್ರೆ ಇವತ್ತು ಇಷ್ಟೊಂದು ಹೊರೆ ಆಗ್ತಾ ಇರ್ಲಿಲ್ಲ ಅಂತ ಅವರಿಗೆ ಆಮೇಲೆ ಜ್ಞಾನೋದಯವಾಗುತ್ತದೆ.

Advertisement

ಅಷ್ಟೆ ಅಲ್ಲ ತುಂಬಾ ಜನರಿಗೆ ಒಳ್ಳೆ ಸಮಯ ಅದಾಗೆ ಒಲಿದು ಬರತ್ತೆ. ಅದನ್ನಾದರೂ ಸರಿಯಾಗಿ ಬಳಸಿಕೊಳ್ಳಬೇಕು. ಅದು ಬಿಟ್ಟು ಮುಂದಿನ್ನೂ ಟೈಮ್‌ ಇದೆ ಅಂತ ಬಂದಿರೋ ಒಳ್ಳೆ ಅವಕಾಶ, ಸಮಯವನ್ನು ಕಳೆದುಕೊಳ್ಳುತ್ತಾರೆ.

ಸಮಯ  ಯಾರನ್ನೇ ಆಗ್ಲಿ ಕಾಯ್ತಾ ಕೂರಲ್ಲ. ಅದು ಪ್ರತೀದಿನ ಪ್ರತೀ ನಿಮಿಷನು ನಡಿತಾನೆ ಇರುತ್ತೆ. ಸಿಕ್ಕಿರುವ ಒಳ್ಳೆ ಸಮಯವನ್ನೇ ನಾವು ಸರಿಯಾಗಿ ಬಳಸಿಕೊಳ್ಳುವುದು ಜಾಣತನ. ಗುರಿ ತಲುಪಲು ಎಷ್ಟೋ ವರ್ಷಗಳ ಪ್ರಯತ್ನವು ಮುಖ್ಯ. ಅದರಂತೆ ಗುರಿ ಹತ್ತಿರವಿದ್ದಾಗ ಮೈ ಮರೆತು ಕೂತರೆ ಪಟ್ಟ ಪ್ರಯತ್ನಕ್ಕೆ ಯಾವುದೇ ಫ‌ಲ ಸಿಗುವುದಿಲ್ಲ. ಸರಿಯಾಗಿ ಗುರಿ ತಲುಪಲು ಸರಿಯಾದ ಸಮಯದ ಅಗತ್ಯವಿರುತ್ತದೆ.

ಭಾವನಾ ಪ್ರಭಾಕರ್‌

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next