Advertisement

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

11:22 PM May 30, 2024 | |

ನವದೆಹಲಿ: ಅಮೆರಿಕದ ಜನಪ್ರಿಯ ನಿಯತಕಾಲಿಕ ಟೈಮ್‌, ಬಿಡುಗಡೆ ಮಾಡಿರುವ ಜಗತ್ತಿನ ಪ್ರಮುಖ 100 ಪ್ರಭಾವಿ ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಸೇರಿದಂತೆ ಭಾರತದ ಮೂರು ಕಂಪನಿಗಳು ಸ್ಥಾನ ಪಡೆದುಕೊಂಡಿವೆ.

Advertisement

ರಿಲಯನ್ಸ್‌ ಇಂಡಸ್ಟ್ರೀಸ್‌, ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮತ್ತು ಟಾಟಾ ಸಮೂಹವು ʼಟೈಮ್‌ʼ ಬಿಡುಗಡೆ ಮಾಡಿರುವ 100 ಕಂಪನಿಗಳಲ್ಲಿ ಸ್ಥಾನ ಪಡೆದುಕೊಂಡಿವೆ.

ಈ ಪಟ್ಟಿಯನ್ನು 5 ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ನಾಯಕ, ಆವಿಷ್ಕಾರ, ನಾವೀನ್ಯ, ಟೈಟಾನ್‌ (ಶಕ್ತಿಶಾಲಿ) ಮತ್ತು ಪ್ರವರ್ತಕ ಎಂದು ವರ್ಗೀಕರಿಸಲಾಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟಾಟಾ ಸಮೂಹವು ಟೈಟಾನ್‌ (ಶಕ್ತಿಶಾಲಿ) ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ. ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಪ್ರವರ್ತಕರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದೆ.

ಟೈಮ್‌ ನಿಯತಕಾಲಿಕವು ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ʼಭಾರತದ ಶಕ್ತಿʼ ಎನ್ನುವ ಉಪನಾಮವನ್ನು ನೀಡಿದೆ. ಜವಳಿ ಮತ್ತು ಪಾಲಿಸ್ಟರ್‌ ಉದ್ದಿಮೆಯಾಗಿ ಆರಂಭವಾದ ರಿಲಯನ್ಸ್‌ ಕಂಪನಿಯು ಇಂದು ಅತಿದೊಡ್ಡ ಮತ್ತು ಶಕ್ತಿಶಾಲಿ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಮಾತ್ರವಲ್ಲ ದೇಶದ ಅತ್ಯಂತ ಮೌಲ್ಯಯುತ ಕಂಪನಿ ಕೂಡಾ ಆಗಿದೆ ಎಂದು ಟೈಮ್‌ ನಿಯತಕಾಲಿಕವು ರಿಲಯನ್ಸ್‌ ಇಂಡಸ್ಟ್ರೀಸ್‌ ಬಗ್ಗೆ ಬರೆದಿದೆ. ಮುಕೇಶ್‌ ಅಂಬಾನಿ ಅವರ ನಾಯಕತ್ವದಲ್ಲಿ ಕಂಪನಿಯು ಇಂಧನ, ರಿಟೇಲ್‌ ಮತ್ತು ದೂರಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಂಡಿದೆ. ಭಾರತದ ಅತಿದೊಡ್ಡ ಡಿಜಿಟಲ್‌ ಸೇವಾ ಪೂರೈಕೆದಾರ ಮತ್ತು ದೂರಸಂಪರ್ಕ ಕಂಪನಿ ಜಿಯೊ ಪ್ಲಾಟ್‌ಫಾರಂ 2021ರಲ್ಲಿ ಈ ಪಟ್ಟಿಗೆ ಸೇರಿಕೊಂಡಿತು. ರಿಲಯನ್ಸ್‌ ಮತ್ತು ಡಿಸ್ನಿ ನಡುವಿನ 8.5 ಬಿಲಿಯನ್‌ ಡಾಲರ್‌ ಒಪ್ಪಂದದ ಬಗ್ಗೆಯೂ ಟೈಮ್‌ ನಿಯತಕಾಲಿಕ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next