Advertisement

ಸಮಯ ಪ್ರಜ್ಞೆಯಿಂದ ತಪ್ಪಿದ ಸಿಲಿಂಡರ್‌ ದುರಂತ

03:33 PM Mar 26, 2022 | Team Udayavani |

ಶಹಾಪುರ: ಗ್ರಾಮದಲ್ಲಿ ಕಳೆದ ಫೆ.25ರಂದು ನಡೆದ ಸಿಲಿಂಡರ್‌ ದುರಂತ ಶುಕ್ರವಾರಕ್ಕೆ ಸರಿಯಾಗಿ ಒಂದು ತಿಂಗಳ ಹೊತ್ತಿಗೆ ಮತ್ತೂಂದು ದುರಂತ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಜೀವಹಾನಿ ಸಂಭವಿಸಿಲ್ಲ.

Advertisement

ಗ್ರಾಮದ ಗಣಪತಿ ತಮಗೊಂಡ ಎಂಬವರ ಮನೆಯಲ್ಲಿ 5 ಕೆ.ಜಿ ಸಿಲಿಂಡರ್‌ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡು ಉರಿಯ ತೊಡಗಿದೆ. ತಕ್ಷಣ ತಡಮಾಡದೇ ಅದನ್ನು ಹಸಿ ತಟ್ಟು, ಹಾಸಿಗೆಯಿಂದ ಮುಚ್ಚಲಾಗಿದೆ. ಆದರೂ ಬೆಂಕಿ ಉರಿ ನಿಲ್ಲದ ಕಾರಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದ್ದು, ಅಗ್ನಿಶಾಮಕ ದಳದ ಠಾಣಾಧಿಕಾರಿ ಮಚ್ಚೇಂದ್ರನಾಥ್‌, ಬಸವರಾಜ ತಂಡ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.

ಇದೇ ಸಂದರ್ಭದಲ್ಲಿ ನೆರದಿದ್ದ ಜನರಲ್ಲಿ ಸಿಲಿಂಡರ್‌ ಬಳಕೆ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿ ಹೇಳಿದರು. ಸಿಲಿಂಡರ್‌ ಆಕಸ್ಮಿಕ ಬೆಂಕಿ ಹತ್ತಿರುವ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಗ್ರಾಮದಲ್ಲಿ ಇದು ಮೂರನೇ ದುರಂತ. ವಾರದ ಹಿಂದೆ ಒಬ್ಬರ ಮನೆಯಲ್ಲೂ ಸಿಲಿಂಡರ್‌ ಅನಿಲ ಸೋರಿಕೆ ವಾಸನೆ ಎಲ್ಲೆಡೆ ಹರಡಿರುವುದರಿಂದ ಯುವಕರಿಬ್ಬರು ಅದನ್ನು ಬ್ಯಾರಲ್‌ ಒಂದರಲ್ಲಿ ಹಾಕಿ ನೀರು ಸುರಿದು ಹೊರವಲಯದಲ್ಲಿ ಹೊತ್ತೊಯ್ದಿದ್ದರು. ಆಗಲೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅದನ್ನು ಸಮರ್ಪಕವಾಗಿ ಪರಿಹರಿಸಿದ್ದರು.

ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿ ಕಾರಿಗಳಾದ ಮಚ್ಚೇಂದ್ರನಾಥ್‌, ಬಸವರಾಜ ಸಿಬ್ಬಂದಿಗಳಾದ ಶಿವರಾಜ, ನೂರಂದಯ್ಯಸ್ವಾಮಿ, ರಫೀಕ್‌, ಮಂಜುನಾಥ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next