ಭಟ್ಕಳ: ರೈಲ್ವೆ ದೃಷ್ಟಿಯಿಂದ ಭದ್ರತೆ ಬಹಳ ಮುಖ್ಯವಾಗಿದ್ದು ಈ ಭಾಗದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಪರಿಶೀಲಿಸಲು ರೈಲಿನಲ್ಲಿಯೇ ಬಂದಿದ್ದೇನೆ ಎಂದು ಕರ್ನಾಟಕ ರೈಲ್ವೆ ಎಡಿಜಿಪಿ ಭಾಸ್ಕರ್‌ರಾವ್ ಹೇಳಿದರು.
ಅವರು ಭಟ್ಕಳದ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಭಾಗದಲ್ಲಿ ಹಲವು ಸುರಂಗ ಮಾರ್ಗಗಳು ಹಾದು ಹೋಗಿವೆ. ಅಲ್ಲದೇ ನಕ್ಸ್‌ಲ್ ಪ್ರದೇಶದಲ್ಲಿ ಕೂಡಾ ರೈಲ್ವೆ ಹಾದು ಹೋಗಿದ್ದು, ಈ ಭಾಗದಲ್ಲಿ ಕೈಗೊಳ್ಳಬೇಕಾದ ಹೆಚ್ಚಿನ ಸೆಕ್ಯುರಿಟಿ ಹಾಗೂ ಬಂದೋಬಸ್ತ್ ಕುರಿತು ತಿಳಿದು ಕೊಳ್ಳಲು ಉಡುಪಿಯಿಂದ ರೈಲಿನಲ್ಲಿಯೇ ಪ್ರಯಾಣ ಮಾಡಿ ಬಂದಿದ್ದೇನೆ ಎಂದ ಅವರು ಕೆಲವೊಮ್ಮೆ ಏನೂ ಆಗಿಲ್ಲ ಎಂದರೆ ಯಾವುದೂ ಅವಶ್ಯಕತೆ ಇರುವುದಿಲ್ಲ. ಆದರೆ ಏನಾದರೊಂದು ಘಟನೆ ಸಂಭವಿಸಿದ ಮೇಲೆ ಏನೂ ಮಾಡಲಿಕ್ಕಾಗುವುದಿಲ್ಲ. ಅದಕ್ಕಾಗಿಯೇ ಮುಂಜಾಗ್ರತಾ ಕ್ರಮದ ಪರಿಶೀಲನೆ ನಡೆಸಿದ್ದೇನೆ ಎಂದರು.
ರೈಲ್ವೆಯಲ್ಲಿ ಮೊಬೈಲ್, ಪರ್ಸ್ ಕಳ್ಳತನ ಹಾಗೂ ಮಹಿಳೆಯರ ಸುರಕ್ಷತೆ ಮತ್ತ ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶಗಳಾಗಿವೆ ಎಂದು ಅವರು ಹೇಳಿದರು. ಉಡುಪಿಯಿಂದ ರೈಲ್ವೆ ಸುರಕ್ಷತೆ ಕುರಿತು ಕೊಂಕಣ ರೈಲ್ವೇ ಮಾರ್ಗದಲ್ಲಿ ಬಂದ ಕೆಲ ಕಿಡಿಗೇಡಿಗಳು ಚಲುಸುತ್ತಿರುವ ರೈಲಿಗೆ ಕಲ್ಲೆಸೆಯುವ ಕೆಲಸ ಮಾಡುತ್ತಾರೆ. ಇದನ್ನೆಲ್ಲಾ ನಿಯಂತ್ರಿಸಲು ನಾವು ರೈಲ್ವೆಯಿಂದ ಸಾಮಾಜಿಕ ಚಳವಳಿಯೊಂದನ್ನು ಮಾಡಿದ್ದು ಗ್ರಾಮೀಣ ಭಾಗದಲ್ಲಿ ಜನರನ್ನು ಜಾಗೃತಗೊಳಿಸಿ ರೈಲ್ವೆ ಹಳಿಯ ಸುರಕ್ಷತೆ ನೋಡಿಕೊಳ್ಳುವಂತೆ ಕೋರುವುದು. ಅಲ್ಲದೇ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನು ತಡೆಯುವುದು ಇತ್ಯಾದಿ ಈ ನಮ್ಮ ಸಾಮಾಜಿಕ ಕಳಕಳಿ ತಂಡ ಮಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ರೈಲ್ವೆಯಲ್ಲಿ ಕೆಲವೊಂದು ಮಾರ್ಗಗಳು ಈಗಾಗಲೇ ನೋಟಿಫೈ ಆಗಿದ್ದು ಅವುಗಳ ಸೆಕ್ಯುರಿಟಿಯೊಂದಿಗೆ ಈ ಭಾಗದ ಪರಿಶೀಲನೆಯೂ ಮುಖ್ಯವಾಗಿದೆ. ನಾವು ಪ್ರಯಾಣಿಕರಿಗೆ ಭದ್ರತೆ ವದಗಿ ಸುವುದು ಬಹಳ ಮುಖ್ಯವಾಗಿದ್ದು ಈ ಭಾಗದಲ್ಲಿ ಯಾವ ರೀತಿ ಭದ್ರತೆಯನ್ನು ಪ್ರಯಾಣಿಕರಿಗೆ ಒದಗಿಸಬ ಹುದು ಎಂದು ಪರಿಶೀಲನೆ ನಡೆಸಿದ್ದೇನೆ ಎಂದ ಅವರು, ಜಿಆರ್‌ಪಿ ಮತ್ತು ಆರ್‌ಪಿಎಫ್ ಒಟ್ಟಿಗೇ ಸೇರಿ ಬಹಳಷ್ಟು ಕೆಲಸಗಳನ್ನು ಮಾಡಬಹದು ಎಂದರು.
ಈ ಬಗ್ಗೆ ಸಮಗ್ರ ವರದಿಯನ್ನು ಸರಕಾರಕ್ಕೆ ಕೊಟ್ಟು, ಕೊಂಕಣ ರೈಲ್ವೆಗೆ ಭಟ್ಕಳ: ಕರ್ನಾಟಕ ರೈಲ್ವೆ ಎಡಿಜಿಪಿ ಭಾಸ್ಕರ್‌ರಾವ್ ಅವರು ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿರುವುದು. ತಿಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.