ನವ ದೆಹಲಿ : ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ದಾಳಿ ನಡೆಸುವ ಕುರಿತು ದೆಹಲಿ ಪೊಲೀಸರಿಗೆ ಇ ಮೇಲ್ ಬಂದಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಮೇಲ್ ಮೂಲಕ ಭಯೋತ್ಪಾದಕ ಸಂಘಟನೆ ಅಲ್ ಖೈದಾ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಯೋಜಿಸಿದೆ ಎಂದು ಎಚ್ಚರಿಕೆ ನೀಡಿದ ನಂತರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ವಿಮಾನ ನಿಲ್ದಾಣದ ಅಧಿಕೃತ ಹೇಳಿಕೆಯ ಪ್ರಕಾರ, ತನಿಖೆಯ ನಂತರ ಬಾಂಬ್ ಬೆದರಿಕೆ ಕೇವಲ ಸುಳ್ಳು ವದಂತಿ ಎಂದು ಕಂಡುಬಂದಿದ್ದು ಆದರೂ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಭದ್ರತೆಯನ್ನು ವಹಿಸಲಾಗಿದೆ ಎಂದಿದ್ದಾರೆ ಅಧಿಕಾರಿಗಳು.
ಶನಿವಾರ ದೆಹಲಿ ಪೊಲೀಸರಿಗೆ ಬಂದ ಇ ಮೈಲ್ ನಲ್ಲಿ ಕರಣ್ ಬೀರ್ ಸೂರಿ ಅಲಿಯಾಸ್ ಮೊಹಮ್ಮದ್ ಜಲಾಲ್ ಮತ್ತು ಕರಣ್ ಬೀರ್ ಸೂರಿಯ ಪತ್ನಿ ಶೈಲಿ ಶಾರದಾ ಅಲಿಯಾಸ್ ಹಸೀನಾ ಭಾನುವಾರ ಸಿಂಗಾಪುರದಿಂದ ಭಾರತಕ್ಕೆ ಬರುತ್ತಿದ್ದು ಈ ನಿಟ್ಟಿನಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಹೇಳಲಾಗಿತ್ತು.
ಇದನ್ನೂ ಓದಿ :ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 1,209 ಕೋಟಿ ನಿವ್ವಳ ಲಾಭ ಗಳಿಸಿದ ಬಿಒಬಿ
ಈ ಕುರುತು ತನಿಖೆ ನಡೆಸಿದ ಅಧಿಕಾರಿಗಳು ಈ ರೀತಿಯ ಬೆದರಿಕೆ ಕರೆಗಳು ಈ ಹಿಂದೆಯೂ ಬಂದಿತ್ತು ಎಂದು ಹೇಳಿದ್ದಾರೆ, ಆದರೂ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆಯನ್ನು ನೇಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಎಲ್ಲಾ ಟರ್ಮಿನಲ್ ಗಳಲ್ಲಿ ಹೆಚ್ಚಿನ ಭದ್ರತೆ ಏರ್ಪಡಿಸಲಾಗಿದೆ, ಪ್ರತಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.