Advertisement
ಹೌದು, ಪರ್ಕಳ-ಮಲ್ಪೆ (12 ಕಿ.ಮೀ.)ರಾ. ಹೆ. 169ಎ ಯ ಪ್ರಥಮ ಹಂತದ ಕಾಮಗಾರಿಯ ನಿಮಿತ್ತ ಹಲವಾರು ವರ್ಷಗಳ ಇತಿಹಾಸ ಇರುವ ಈ ಸರ್ಕಲ್ ಅನ್ನು ಸೋಮವಾರ ತಡರಾತ್ರಿ ತೆರವುಗೊಳಿಸಲಾಯಿತು.
Related Articles
Advertisement
ಟೈಗರ್‌ಸರ್ಕಲ್ ಅಂದರೆ ಮಣಿಪಾಲದ ಕೇಂದ್ರ ಸ್ಥಳ ಅನ್ನುವಷ್ಟು ಪ್ರಸಿದ್ಧಿ ಪಡೆದಿದ್ದು, ಇದರ ತೆರವಿನ ಅನಂತರ ಮುಂದೇನು ಅನ್ನುವ ಪ್ರಶ್ನೆ ಜನಸಾಮಾನ್ಯರನ್ನು ಕಾಡಲಾರಂಭಿಸಿದೆ. ಮುಂದೆ ಸರ್ಕಲ್ ಆಗಬೇಕೆಂದಿದ್ದರೆ ಭೂ ಸಾರಿಗೆ ಇಲಾಖೆಯ ಅನುಮತಿ ಕಡ್ಡಾಯವಾಗಿರುತ್ತದೆ. ಪ್ರಸ್ತುತ ಇಲ್ಲಿ ನೇರ ರಸ್ತೆ ಮಾಡುವ ನೀಲನಕ್ಷೆ ಇದೆ. ಟ್ರಾಫಿಕ್ ಬಗ್ಗೆಯೂ ವಿವಿಧ ಯೋಜನೆಗಳು ರೂಪುಗೊಳ್ಳುವ ಸಾಧ್ಯತೆಯಿದೆ.
ಬಸ್ ಬೇ
ಮಂಗಳೂರು-ಮಣಿಪಾಲ ಸಹಿತ ಅನೇಕ ಕಡೆಗಳಿಂದ ಬರುವ ಬಸ್ಸು, ಇತರ ವಾಹನಗಳು ಇಲ್ಲಿ ಸುತ್ತುಹೊಡೆದು ಹೋಗುವುದು ವಾಡಿಕೆ. ಆದರೆ ಮುಂದೆ ಹಾಗಾಗುವುದಿಲ್ಲ. ಬದಲಿಗೆ ಇಲ್ಲಿ ಬಸ್‌ಬೇ ನಿರ್ಮಿಸುವ ಯೋಜನೆಯೂ ಇದೆ ಎಂದು ಹೆದ್ದಾರಿ ಇಲಾಖೆಯ ಮೂಲಗಳು ಉದಯವಾಣಿಗೆ ತಿಳಿಸಿವೆ. ಮಣಿಪಾಲದ ಬಸ್ ನಿಲ್ದಾಣ ಸಹಿತ ವಿವಿಧ ಅಭಿವೃದ್ಧಿ ಯೊಜನೆಗಳ ಪ್ರಸ್ತಾವನೆಗಳಿವೆ.