Advertisement

ಹುಣಸೂರು:  ಹುಲಿ ಸೆರೆ ಕಾರ್ಯಾಚರಣೆಗೆ ದನಗಾಹಿಗಳಿಂದ ಅಡ್ಡಿ

06:28 PM Sep 14, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದಂಚಿನಲ್ಲಿ ಹುಲಿ ಸೆರೆ ಕಾರ್ಯಾಚರಣೆಗೆ ದನಗಾಹಿಗಳಿಂದ ಅಡ್ಡಿಯಾಗಿದೆ.

Advertisement

ಸೆ.8 ರ ಬೆಳಗ್ಗೆ ಉದ್ಯಾನವನದಂಚಿನ ಅಯ್ಯನಕೆರೆ ಹಾಡಿಯ ಗಣೇಶನನ್ನು ಬಹಿರ್ದೆಸೆಗೆ ತೆರಳಿದ್ದ ವೇಳೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಹುಲಿ ಪತ್ತೆಗೆ  ಸುಮಾರು 70 ಟ್ರ್ಯಾಪಿಂಗ್ ಕ್ಯಾಮರಾ ಅಳವಡಿಸಲಾಗಿತ್ತು.

ಸಂಜೆಯಿಂದಲೇ ಹುಲಿ ಸೆರೆಗೆ ಒಂದೆಡೆ ಬೋನ್ ಇರಿಸಿದ್ದರೆ ಮತ್ತೊಂದೆಡೆ ಕೂಂಬಿಂಗ್ ಆರಂಬಿಸಲಾಗಿತ್ತು. ಮೂರು ಕ್ಯಾಮರಾಗಳನ್ನು ಕಳ್ಳ ಬೇಟೆಗೆ ಬಂದಿದ್ದವರು ಕಳ್ಳತನ ಮಾಡಿದ್ದರು. ಒಂದು ಕಡೆ ಜಿಂಕೆ ಬೇಟೆಯೂ ಪತ್ತೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಸಿಬ್ಬಂದಿಗಳು ಹನಗೋಡು ಹೋಬಳಿಯ ಸಿಂಡೇನಹಳ್ಳಿ. ಕಿಕ್ಕೇರಿ ಕಟ್ಟೆಯ ಕೆಲ ಮನೆಗಳ ಮೇಲೆ ದಾಳಿ ನಡೆಸಿದ ವೇಳೆ ಸಿಂಡೇನಹಳ್ಳಿಯ ಸುಜೇಂದ್ರ ಎಂಬಾತನ ಮನೆಯಲ್ಲಿ ಜಿಂಕೆ ಮಾಂಸ ಪತ್ತೆಯಾಗಿ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಈ ನಡುವೆ ಕಾಡಂಚಿನ ಜನರಲ್ಲಿ ಎಷ್ಟೇ ಮನವಿ ಮಾಡಿದರೂ ಅರಣ್ಯದೊಳಗೆ ಜಾನುವಾರುಗಳನ್ನು ಮೇಯಲು ಬಿಡುತ್ತಿರುವುದು ಸಹ ಕೂಂಬಿಂಗ್ ನಡೆಸಲು ಅಡಚಣೆಯಾಗಿದೆ. ಗ್ರಾಮಸ್ಥರು ಜಾನುವಾರುಗಳನ್ನು ಕಾಡಿನೊಳಗೆ ಬಿಡದಂತೆ ನಾಗರಹೊಳೆ ಹುಲಿ ಯೋಜನೆ ನಿರ್ದೆಶಕ ಡಿ.ಮಹೇಶ್ ಕುಮಾರ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next