ಚಂಡೀಗಢ: ಸ್ವಾತಂತ್ರ್ಯ ದಿನ ಸಮೀಪಿಸುತ್ತಿದ್ದಂತೆಯೇ ದೇಶದಲ್ಲಿ ಭೀಭತ್ಸ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಮುಂದಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ವಿಧ್ವಂಸಕ ಕೃತ್ಯ ತಡೆ ಯುವಲ್ಲಿ ಪೊಲೀಸರು ಯಶಸ್ವಿಯಾದ್ದಾರೆ.
ಇದನ್ನೂ ಓದಿ:ಕಂಠಪೂರ್ತಿ ಕುಡಿದು ಚಾಲನೆ: ವಾಹನಗಳಿಗೆ ಢಿಕ್ಕಿ ಹೊಡೆದು ಮನೆಯೊಳಗೆ ಲಾರಿ ನುಗ್ಗಿಸಿದ ಚಾಲಕ
ಪಂಜಾಬ್‌ನ ದಲೇಕಾ ಗ್ರಾಮದಲ್ಲಿ ಟಿಫಿನ್ ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಸುಧಾರಿತ ಸ್ಫೋಟಕ(2 ಕೆಜಿಆರ್ ಡಿಎ ಕ್ಸ್) ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪಾಕಿಸ್ತಾ ನವೇ ಅದನ್ನು ಹೈಟೆ ಕ್ ಡ್ರೋನ್ ಮೂಲಕ ಭಾನುವಾರ ಸಂಜೆ ದೇಶದ ಗಡಿಯೊಳಕ್ಕೆ ತಂದು ಹಾಕಿರುವ ಸಾಧ್ಯತೆಗಳಿವೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ ಹೇಳಿದ್ದಾರೆ.
100 ಕ್ಯಾಟ್ರಿಡ್ಜ್ಗಳು, 2 ಕೆಜಿಯಷ್ಟು ಸ್ಫೋಟಕಗಳಿಗೆ ಬಳಸುವ ವಸ್ತುಗಳು, ರಿಮೋಟ್ ಕಂಟ್ರೋಲ್, ಸ್ವಿಚ್ ಕೂಡ ಅದರಲ್ಲಿದ್ದವು. ಬ್ಯಾಗ್‌ನಲ್ಲಿ ಮುದ್ರಿತ ಸರ್ಕಿಟ್ ಬೋರ್ಡ್ ಕೂಡ ಇದ್ದುದರಿಂದ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಸ್ಫೋಟಕ್ಕೆ ಯತ್ನ ನಡೆಸಿದ್ದು ಸ್ಪಷ್ಟ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ ಪಂಜಾಬ್ ಜತೆ ಹೊಂದಿಕೊಂಡಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕೈಚೀಲವೊಂದು ಪತ್ತೆಯಾಗಿದ್ದು, ಅದರಲ್ಲಿದ್ದ 5 ಹ್ಯಾಂಡ್ ಗ್ರೆನೇಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಇಬ್ಬರು ಹಿಜ್ಬುಲ್ ಉಗ್ರರ ಬಂಧನ
ಜಮ್ಮು: ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಭದ್ರತೆ ಹೆಚ್ಚಿಸಿರುವಂತೆಯೇ ಜಮ್ಮುವಿನಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ಭದ್ರತಾ ಪಡೆ ಬಂಧಿಸಿದೆ.
ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣಗಳನ್ನು ಭೇದಿಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊಸದಾಗಿ ಹಿಜ್ಬುಲ್‌ಗೆ ನೇಮಕಗೊಂಡಿದ್ದ ಯಾಸಿರ್ ಹುಸೇನ್ ಮತ್ತು ಉಸ್ಮಾನ್ ಖಾದಿರ್‌ನನ್ನು ಬಂಧಿಸಲಾಗಿದೆ.