Advertisement

ಬಂಟರ ಯಾನೆ ನಾಡವರ ಮಾತೃಸಂಘ –ಚಾಣಕ್ಯ ಐಎಎಸ್‌ ಅಕಾಡೆಮಿ ಒಡಂಬಡಿಕೆ

03:35 AM Jul 04, 2017 | Team Udayavani |

ಮಂಗಳೂರು: ಮಂಗಳೂರಿನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಸಹಯೋಗದೊಂದಿಗೆ ದೇಶದ ಪ್ರತಿಷ್ಠಿತ ‘ಚಾಣಕ್ಯ ಐಎಎಸ್‌ ಅಕಾಡೆಮಿ’ಯು ಯುಪಿಎಸ್‌ಸಿಯ ಐಎಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಹಾಗೂ ಕೆಎಎಸ್‌ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಲು ಜೂ. 29ರಂದು ಮಂಗಳೂರಿನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ. ಮಂಗಳೂರಿನ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ವಠಾರದಲ್ಲಿ ಆಗಸ್ಟ್‌ ತಿಂಗಳಿನಿಂದ ಪ್ರಥಮ ಬ್ಯಾಚ್‌ ಆರಂಭಿಸುವುದೆಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ ಮತ್ತು ಚಾಣಕ್ಯ ಐಎಎಸ್‌ ಅಕಾಡೆಮಿಯ ಸಿಇಒ ಯಚಿನಿತ್‌ ಪುಷ್ಕರ್ಣ ಅವರು ಒಡಂಬಡಿಕೆಗೆ ಸಹಿ ಮಾಡಿದರು.

Advertisement

ಸೆನೆಗಲ್‌, ಬಹ್ರೈನ್‌ ಮತ್ತು ಸ್ವೀಡನ್‌ ಸಹಿತ ಹಲವು ದೇಶಗಳಲ್ಲಿ ಭಾರತದ ರಾಯಭಾರಿಯಾಗಿದ್ದ ಬಾಲಕೃಷ್ಣ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ, ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್‌ ರೈ ಮತ್ತು ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಗಳ ಸಂಚಾಲಕ ಕೃಷ್ಣಪ್ರಸಾದ್‌ ರೈ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next