Advertisement

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

02:02 AM Nov 05, 2024 | Team Udayavani |

ತಿರುವನಂತಪುರ: ಐಎಎಸ್‌ ಅಧಿಕಾರಿಗಳ ಧರ್ಮಾಧಾರಿತ ವಾಟ್ಸ್‌ಆ್ಯಪ್‌ ಗ್ರೂಪ್‌ ಸೃಷ್ಟಿ ಕೇರಳದಲ್ಲಿ ವಿವಾದ ಸೃಷ್ಟಿಸಿದೆ. ತಮ್ಮ ಮೊಬೈಲ್‌ ಸಂಖ್ಯೆ ಬಳಸಿಕೊಂಡು ಯಾರೋ “ಮಲ್ಲು ಹಿಂದೂ ಅಧಿಕಾರಿಗಳು’ ಮತ್ತು “ಮಲ್ಲು ಮುಸ್ಲಿಂ ಅಧಿಕಾರಿಗಳು’ ಎಂಬ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗುಂಪು ರಚಿಸಿರುವುದಾಗಿ ಆರೋಪಿಸಿ ಐಎಎಸ್‌ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಐಎಎಸ್‌ ಅಧಿಕಾರಿ ಕೆ.ಗೋಪಾಲಕೃಷ್ಣನ್‌ ಈ ದೂರು ನೀಡಿದ್ದು, ನನ್ನ ವಾಟ್ಸ್‌ ಆ್ಯಪ್‌ ಹ್ಯಾಕ್‌ ಮಾಡಿ, ಧರ್ಮಾಧಾರಿತ ಗುಂಪುಗಳನ್ನು ರಚನೆ ಮಾಡಲಾಗಿದೆ. ಇದರಲ್ಲಿ ನನ್ನನ್ನು ಅಡ್ಮಿನ್‌ ಮಾಡಲಾಗಿದೆ. ಅಲ್ಲದೇ ನನ್ನ ಸಂಪರ್ಕದಲ್ಲಿದ್ದ ಇತರ ಅಧಿಕಾರಿಗಳನ್ನು ಸಹ ಈ ಗುಂಪುಗಳಿಗೆ ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಕೇರಳ ಸರಕಾರ ತನಿಖೆಗೆ ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next