Advertisement
ವಿಜಯಪುರ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ| ಮಕಬೂಲ್ ಬಾಗವಾನಗೆ ಟಿಕೆಟ್ ಕೈ ತಪ್ಪಿದ್ದು, ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಕಾಂಗ್ರೆಸ್ ಮಣೆ ಹಾಕಿ ಮತ್ತೂಮ್ಮೆ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿದೆ. ಕಳೆದ ಬಾರಿ ಹೊಸ ಮುಖವಾಗಿದ್ದ ಡಾ| ಬಾಗವಾನ ಈ ಬಾರಿ ಟಿಕೆಟ್ ಕಳೆದುಕೊಂಡಿದ್ದು, ಅವರ ನಡೆ ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ಮಧ್ಯೆ ರವಿವಾರ ಮಧ್ಯಾಹ್ನದಿಂದಲೇ ಹಮೀದ್ ಮುಶ್ರೀಫ್ ಬೆಂಬಲಿಗರು ನಗರದಲ್ಲಿ ಸಂಭ್ರಮದಲ್ಲಿದ್ದಾರೆ.
Related Articles
ವಿಜಯಪುರ ನಗರಸಭೆ ಮಾಜಿ ಅಧ್ಯಕ್ಷ ಮಿಲಿಂದ ಚಂಚಲಕರ ಪೈಪೋಟಿ ಹಚ್ಚಿರುವ ಕಾರಣ ಈ ಕ್ಷೇತ್ರದ ಟಿಕೆಟ್ ಕೂಡ ಇನ್ನೂ ಪ್ರಕಟಗೊಂಡಿಲ್ಲ.
Advertisement
ಉಳಿದಂತೆ ಸಚಿವ ಡಾ| ಎಂ.ಬಿ. ಪಾಟೀಲ-ಬಬಲೇಶ್ವರ, ಹಾಲಿ ಶಾಸಕರಾದ ಸಿ.ಎಸ್. ನಾಡಗೌಡ-ಮುದ್ದೇಬಿಹಾಳ,ಬಸವನಬಾಗೇವಾಡಿ-ಶಿವಾನಂದ ಪಾಟೀಲ, ಇಂಡಿ-ಯಶವಂತರಾಯಗೌಡ ಪಾಟೀಲ ಇವರಷ್ಟೇ ಟಿಕೇಟ್ ಆಕಾಂಕ್ಷಿಗಳಾಗಿದ್ದು ಸಹಜವಾಗಿಯೇ ಇವರಿಗೆ ಮಣೆ ಹಾಕಲಾಗಿದೆ. ಇನ್ನು ಟಿಕೆಟ್ ಹಂಚಿಕೆ ಹಂತದಲ್ಲಿ ಮುಸ್ಲಿಂ, ಕೂಡುಒಕ್ಕಲಿಗ, ಪಂಚಮಸಾಲಿ, ಆದಿ ಬಣಜಿಗ ಸಮುದಾಯಕ್ಕೆ ತಲಾ ಒಂದೊಂದು ಟಿಕೆಟ್ ದಕ್ಕಿದ್ದರೆ ರಡ್ಡಿ ಸಮುದಾಯಕ್ಕೆ ಎರಡು ಟಿಕೇಟ್ ನೀಡಿ ಮಣೆ ಹಾಕಲಾಗಿದೆ. ಜಾತಿ ಲೆಕ್ಕಾಚಾರದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಹಾಲುಮತ, ಗಂಗಾಮತ, ಗಾಣಿಗ ಸಮುದಾಯಕ್ಕೆ ಮಣೆ ಹಾಕಿಲ್ಲ. ಇದು ಜಿಲ್ಲೆ ಕಾಂಗ್ರೆಸ್ ವಲಯದಲ್ಲಿ ಪ್ರತಿರೋಧದ ಬೆಂಕಿ ಹೊತ್ತಿರುವ ನಿರೀಕ್ಷೆ ಇದೆ. ಏಕೆಂದರೆ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಈ ಎರಡೂ ಸಮುದಾಯದವರೇ ನಿರ್ಣಾಯಕ ಮತದಾರಿದ್ದಾರೆ. ಉಳಿದಿರುವ ಸಿಂದಗಿ ಮಾತ್ರ ಪ್ರಕಟಣೆಗೆ ಬಾಕಿ ಇದ್ದು ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಶಾಸಕ ಬಾಗವಾನಗೆ ಮುಖಭಂಗ
ವಿಜಯಪುರ: ವಿಜಯಪುರ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ| ಎಂ.ಎಸ್. ಬಾಗವಾನ ವರಿಗೆ ಟಿಕೆಟ್ ಕೈ ತಪ್ಪಿಸುವಲ್ಲಿ ಅವರ ವಿರೋಧಿ ಪಾಳೆಯ ಯಶಸ್ವಿಯಾಗಿದೆ. ಆ ಮೂಲಕ ಬಾಗವಾನ ಅವರಿಗೆ ಸ್ವಪಕ್ಷೀಯ ವಿರೋಧಿಗಳು ಟಾಂಗ್ ನೀಡಿ ಕೈ ಕೈ ಚುಕಿಕೊಳ್ಳುವಂತೆ ಮಾಡಿದ್ದಾರೆ. ಟಿಕೆಟ್ ಹಂಚಿಕೆಗೆ ಮುನ್ನವೇ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಒಂದು ಬಣ ಹಾಲಿ ಶಾಸಕ ಡಾ| ಬಾಗವಾನಗೆ ಟಿಕೆಟ್ ನೀಡದಂತೆ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಹಿರಂಗ ಆಕ್ರೋಶ ಹೊರ ಹಾಕಿತ್ತು. ನಗರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸುಮಾರು 22 ಜನರಲ್ಲಿ ಎಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಮುಶ್ರೀಫ್ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಶಾಸಕರ ವಿರೋಧಿಗಳು ಯಶಸ್ವಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕೂಡ ಹಲವು ಪ್ರಬಲರ ಮಧ್ಯೆ ಪಕ್ಷದಲ್ಲೇ ಪ್ರಮುಖ ನಾಯಕರಿಗೆ ಹೆಸರೇ ಗೊತ್ತಿಲ್ಲದ ಡಾ| ಎಂ.ಎಸ್. ಬಾಗವಾನ ರಾಜಕೀಯ ಲೆಕ್ಕಾಚಾರಗಳನ್ನು ತಲೆ ಕೆಳಗು ಮಾಡಿ ಟಿಕೆಟ್ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದರು. ಟಿಕೇಟ್ ಪೈಪೋಟಿ ನಡೆಸಿದ್ದ ಎಲ್ಲರೂ ಬಿಜೆಪಿ-ಕೆಜೆಪಿ ಅಭ್ಯರ್ಥಿಗಳಿಗೆ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ತಮ್ಮ ಅತೃಪ್ತಿ ನುಂಗಿಕೊಂಡು ಒಗ್ಗಟ್ಟಿನಿಂದ ಡಾ| ಎಂ.ಎಸ್. ಬಾಗವಾನ ಅವರ ಗೆಲುವಿಗೆ ಶ್ರಮಿಸಿದ್ದರು. ಆದರೆ ಗೆದ್ದ ನಂತರ ಪಕ್ಷದ ಸಂಘಟನೆ ಹಾಗೂ ಅವಕಾಶಗಳ ಹಂಚಿಕೆ ವಿಷಯದಲ್ಲೂ ಕುಟುಂಬ ರಾಜಕೀಯ ಮಾಡಿದರೆಂಬ ಕಾರಣಕ್ಕೆ ಗೆಲ್ಲಿಸಿದವರೆ ವೈರಿಗಳಾಗಿ ಪರಿವರ್ತನೆಗೊಂಡಿದ್ದರು. ಚುನಾವಣೆಯ ಸದಾವಕಾಶಕ್ಕೆ ಕಾಯುತ್ತಿದ್ದ ಡಾ| ಬಾಗವಾನ ವಿರೋಧಿ ಬಣ ಕೊನೆಗೂ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಮುಶ್ರೀಫ್ ಅವರಿಗೆ ಟಿಕೆಟ್ ಕೊಡಿಸುವ ಮೂಲಕ ಹಾಲಿ ಶಾಸಕ ಡಾ| ಬಾಗವಾನ ಕೈ ಕೈ ಹಿಚುಕಿಕೊಳ್ಳುವಂತೆ ಮಾಡಿದ್ದಾರೆ ಜಿ.ಎಸ್. ಕಮತರ