ಮಂಡ್ಯ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳ ಕ್ಷೇತ್ರಗಳಿಗೆ ಮೀಸಲಾತಿ ಹೊರಡಿಸಿ ಚುನಾವಣಾಆಯೋಗ ಆದೇಶ ಹೊರಡಿಸಿದ್ದು, ಕೆಲ ಹಾಲಿ ಸದಸ್ಯರುಹಾಗೂ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳಿಂದ ಟಿಕೆಟ್‌ಗಾಗಿಲಾಬಿ ಹಾಗೂ ಮೀಸಲಾತಿ ಬದಲಾವ ಣೆಗೆ ಆಕ್ಷೇಪಣೆಸಲ್ಲಿಸಲು ಕಸರತ್ತು ಆರಂಭಗೊಂಡಿದೆ.
ಈಗಾಗಲೇ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ಹಾಲಿಸದಸ್ಯರಿದ್ದ ಕೆಲ ಕ್ಷೇತ್ರಗಳು ಬದಲಾವಣೆಗೊಂಡಿದ್ದವು. ಅಲ್ಲದೆ,ಸ್ಪರ್ಧೆ ಮಾಡಬೇಕು ಎಂಬ ಆಕಾಂಕ್ಷಿತರಿಗೂ ಕೈ ತಪ್ಪಿತ್ತು. ಈಗಮತ್ತೆ ಚುನಾವಣಾ ಆಯೋಗ ಹೊರಡಿಸಿರುವ ಮೀಸಲಾತಿಯಿಂದ ಕೆಲ ಹಾಲಿ ಸದಸ್ಯರಿಗೆ, ರಾಜ ಕಾ ರಣಿಗಳ ಮಕ್ಕಳುಹಾಗೂ ಸಂಬಂಈಜಿಕರ Óರ್ಧೆಗೆ ³ ತೊಡಕುಂಟಾಗಿದೆ.
ನಾಯಕರ ಮೇಲೆ ಒತ್ತಡ: ಮೀಸಲಾತಿಗೆ ಸಂಬಂಧಿಸಿದಂತೆಆಕ್ಷೇಪಣೆ ಸಲ್ಲಿಸಲು (ಜು.8) ರವರೆಗೆ ಕಾಲಾವಕಾಶ ಇರುವುದರಿಂದ ಸ್ಪರ್ಧೆ ಬಯಸಿರುವ ಆಕಾಂಕ್ಷಿಗಳು ತಮ್ಮ ರಾಜಕೀಯ ನಾಯಕರ ಮೇಲೆ ಒತ್ತಡ ಹೇರಿ ಮೀಸಲಾತಿಬದಲಾವಣೆ ಮಾಡಲು ಲಾಬಿ ಆರಂಭಿಸಿ ದ್ದಾರೆ. ಅದಕ್ಕಾಗಿ ಚುನಾವಣೆ ಆಯೋಗಕ್ಕೆ ತಮ್ಮ ಮನವಿ ಮಾಡಲುಮುಂದಾಗಿದ್ದಾರೆ.
ಆಕಾಂಕ್ಷಿಗಳಿಂದ ಟಿಕೆಟ್ ಲಾಬಿ: ಜಿಪಂ ಹಾಗೂ ತಾಪಂಚುನಾ ವಣೆಯು ಪಕ್ಷಗಳ ಚಿಹ್ನೆಯ ಮೇಲೆ ನಡೆಯುವುದರಿಂದ ಮೀಸಲಾತಿಯಿಂದ ಕ್ಷೇತ್ರ ಸಿಕ್ಕಿರುವ ಆಕಾಂಕ್ಷಿಗಳುಟಿಕೆಟ್‌ಗಾಗಿ ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ಹಾಗೂ ಬಿಜೆಪಿ ಪಕ್ಷಗಳ ಟಿಕೆಟ್ ಪಡೆಯಲು ತಮ್ಮ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ನಾಯಕರು ಹಾಗೂಮುಖಂಡರು ತಮ್ಮ ಬೆಂಬಲಿಗರಿಗೆ ಕ್ಷೇತ್ರ ಉಳಿಸಿಕೊಳ್ಳಲುಒಂದೆಡೆ ಮೀಸಲಾತಿ ಬದಲಾವಣೆ ಮಾಡಿಸಲು ಮುಂದಾಗಿದ್ದರೆ, ಮತ್ತೂಂದೆಡೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಎಚ್.ಶಿವರಾಜು