Advertisement

ಟಾಟಾ ಟಿಯಾಗೋ ಇವಿ ಬುಕಿಂಗ್‌ ಆರಂಭ; 315 ಕಿ.ಮೀ. ಮೈಲೇಜ್‌ ಕೊಡುವ ಕಾರು

08:32 PM Oct 10, 2022 | Team Udayavani |

ಕಳೆದು ತಿಂಗಳು ಬಿಡುಗಡೆಯಾದ ಟಾಟಾ ಟಿಯಾಗೋ ಎಲೆಕ್ಟ್ರಿಕ್‌ ಕಾರಿನ ಬುಕಿಂಗ್‌ ಸೋಮವಾರದಿಂದ ಆರಂಭವಾಗಿದೆ. ಆಸಕ್ತರು 21,000 ರೂ. ಮುಂಗಡ ಪಾವತಿ ಮಾಡಿ ಬುಕಿಂಗ್‌ ಮಾಡಿಕೊಳ್ಳಬಹುದಾಗಿದೆ.

Advertisement

ಕಾರಿನ ಬೆಲೆ 8.49 ಲಕ್ಷ ರೂ.(ಎಕ್ಸ್‌ ಶೋ ರೂಂ)ನಿಂದ ಆರಂಭ.

ಈ ಕಾರು 315ಕಿ.ಮೀ.ವರೆಗೆ ಮೈಲೇಜ್‌ ಕೊಡಬಲ್ಲದು. 30 ನಿಮಿಷಗಳ ಚಾರ್ಜಿಂಗ್‌ಗೆ 35ಕಿ.ಮೀ. ಸಂಚರಿಸಬಹುದು. 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್‌ ಆಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಡಿಸೆಂಬರ್‌ ತಿಂಗಳಿನಿಂದ ಕಾರಿನ ಟೆಸ್ಟ್‌ ಡ್ರೈವ್‌ ಸೌಲಭ್ಯ ಆರಂಭವಾಗಲಿದ್ದು, 2023ರ ಜನವರಿಯಿಂದ ಕಾರು ಡೆಲಿವರಿ ಮಾಡಲಾಗುವುದು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next