Advertisement

‘ತುರ್ತು ನಿರ್ಗಮನ’ಕ್ಕೆ ಕೌಂಟ್‌ಡೌನ್‌: ಜೂ. 24ಕ್ಕೆ ತೆರೆಗೆ

02:01 PM Jun 17, 2022 | Team Udayavani |

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ “ತುರ್ತು ನಿರ್ಗಮನ’ ಸಿನಿಮಾದ ಟ್ರೇಲರ್‌ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. “ತುರ್ತು ನಿರ್ಗಮನ’ದ ಟ್ರೇಲರ್‌ಗೆ ಚಿತ್ರರಂಗ ಮತ್ತು ಸಿನಿಪ್ರಿಯರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೆ, ಚಿತ್ರತಂಡ ಇದೇ ಜೂ. 24ರಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಯೋಜನೆ ಹಾಕಿಕೊಂಡಿದೆ.

Advertisement

ತಮ್ಮ ಬಿಡುಗಡೆಯ ಕುರಿತು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು. ಚಿತ್ರದ ಬಗ್ಗೆ ಮೊದಲಿಗೆ ಮಾತನಾಡಿದ ನಿರ್ದೇಶಕ ಹೇಮಂತ್‌ ಕುಮಾರ್‌, “ಇದೊಂದು ಸೈ-ಫೈ ಸಬ್ಜೆಕ್ಟ್ ಸಿನಿಮಾ. ಕನ್ನಡದಲ್ಲಿ ನಮಗೆ ತಿಳಿದಿರುವ ಮಟ್ಟಿಗೆ ಈ ಥರದ ಸಬ್ಜೆಕ್ಟ್ ಮೇಲೆ ಬರುತ್ತಿರುವ ಮೊದಲ ಸಿನಿಮಾ ಇದು. ಈಗಾಗಲೇ ರಿಲೀಸ್‌ ಆಗಿರುವ ನಮ್ಮ ಸಿನಿಮಾದ ಟ್ರೇಲರ್‌ಗೆ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ಥಿಯೇಟರ್‌ನಲ್ಲೂ ಸಿನಿಮಾ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

“ನಾನು ಲೀಡ್‌ ಆಗಿ ಅಭಿನಯಿಸಿ ಹಲವು ವರ್ಷಗಳಾಗಿತ್ತು. ಒಂದೊಳ್ಳೆ ಸಿನಿಮಾದ ಮೂಲಕ ಕಂ ಬ್ಯಾಕ್‌ಗಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ “ತುರ್ತು ನಿರ್ಗಮನ’ ಸಿನಿಮಾ ಸಿಕ್ಕಿತು. ನಿರ್ದೇಶಕರು ಹೇಳಿದ ಕಥೆ ಕೇಳಿದ, ಅರ್ಧ ಗಂಟೆಯಲ್ಲಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ನಾನು ಅಂದುಕೊಂಡಿರುವುದಕ್ಕಿಂತಲೂ ಸಿನಿಮಾ ತುಂಬ ಚೆನ್ನಾಗಿ ಬಂದಿದೆ’ ಎಂಬುದು ನಾಯಕ ನಟ ಸುನೀಲ್‌ ರಾವ್‌ ಮಾತು.

ಇದನ್ನೂ ಓದಿ:ತೆರೆಮೇಲೆ ಬರಲಿದೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಬಯೋಪಿಕ್!

ಚಿತ್ರದಲ್ಲಿ ನಟ ರಾಜ್‌ ಬಿ. ಶೆಟ್ಟಿ ಕ್ಯಾಬ್‌ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸುಧಾರಾಣಿ ನರ್ಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಮತ್ತು ತಮ್ಮ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದು ರಾಜ್‌ ಬಿ. ಶೆಟ್ಟಿ, ಸುಧಾರಾಣಿ, ಹಿತಾ ಚಂದ್ರಶೇಖರ್‌, ಸಂಯುಕ್ತಾ ಹೆಗ್ಡೆ, ಅರುಣಾ ಬಾಲರಾಜ್‌ ಸೇರಿದಂತೆ ಬಹುತೇಕ ಕಲಾವಿದರ ಒಕ್ಕೊರಲ ಮಾತು.

Advertisement

ನಿರ್ಮಾಪಕ ಶರತ್‌ ಭಗವಾನ್‌, ಸಂಗೀತ ನಿರ್ದೇಶಕ ಧೀರೇಂದ್ರ ದಾಸ್‌ ಮೂಡ್‌, ಛಾಯಾಗ್ರಹಕ ಪ್ರಯಾಗ್‌ ಚಿತ್ರದ ಕುರಿತು ಭರವಸೆಯ ಮಾತುಗಳನ್ನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next