Advertisement

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

02:45 PM Nov 08, 2024 | Team Udayavani |

ಅತ್ಯಂತ ಜೋಶ್‌ನಿಂದಲೇ ಕನ್ನಡ ಸಿನಿ ಜಗತ್ತಿಗೆ ಬಂದ ನಟ ರಾಕೇಶ್‌ ಅಡಿಗ, ಹಲವು ಸಿನಿಮಾಗಳಲ್ಲಿ ನಟಿಸಿ, ಮತ್ತಷ್ಟು ಹೊಸ ಅವಕಾಶಗಳನ್ನು ನಿರೀಕ್ಷಿಸುತ್ತಲೇ ಇದ್ದರು. ಈಗ ಅವರ ಸಿನಿ ಪಯಣದಲ್ಲಿ ಹೊಸ ಪ್ರಶ್ನೆಯೊಂದು ಎದುರಾಗಿದೆ. ತೆರೆಗೆ ಸಿದ್ಧವಾಗಿರುವ “ಮರ್ಯಾದೆ ಪ್ರಶ್ನೆ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ರಾಕೇಶ್‌. ಸದ್ಯ ಸಿನಿಮಾ ಪ್ರಚಾರದಲ್ಲೇ ಬಿಝಿಯಾಗಿರುವ ಅವರು, ಈ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತು ಹಂಚಿಕೊಂಡಿದ್ದಾರೆ.

Advertisement

“ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ಅವಕಾಶ ಹೇಗೆ ಸಿಕ್ಕಿತು?

ಸಖತ್‌ ಸ್ಟುಡಿಯೋದ ಪ್ರದೀಪ್‌ ಅವರು ಕರೆ ಮಾಡಿ ಸಿನಿಮಾ ಬಗ್ಗೆ ಹೇಳಿದರು. ಕಥೆ ಕೇಳಿದ ಮೇಲೆ, ಒಂದಿಷ್ಟು ಲುಕ್‌ ಟೆಸ್ಟ್‌ ಆಯಿತು. ಚಿತ್ರದ ಸೂರಿ ಪಾತ್ರಕ್ಕೆ ನಾನು ಸೂಕ್ತ ಎನಿಸಿ ಆಯ್ಕೆ ಮಾಡಿದರು. ತಾಂತ್ರಿಕವಾಗಿ ತಂಡ ಚೆನ್ನಾಗಿತ್ತು. ಇದರಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ.

ಚಿತ್ರದಲ್ಲಿ ನಿಮ್ಮ ಪಾತ್ರವೇನು?

ರಾಜಕೀಯ ನಾಯಕನಿಗೆ ಆಪ್ತನಾಗಿರುವ ಕಾರ್ಯಕರ್ತನೊಬ್ಬ ಪ್ರತಿ ಏರಿಯಾದಲ್ಲಿ ಇರುತ್ತಾನೆ. ಅವನಿಗೂ ಕಾಪೋರೇಟರ್‌ ಆಗಬೇಕೆಂಬ ಕನಸು ಇರುತ್ತದೆ. ಉದಯೋನ್ಮುಖ ನಾಯಕ ಎಂದು ಹೇಳಬಹುದು. ಅಂಥಾ ಪಾತ್ರ ನನ್ನದು. ಸಾಮಾಜಿಕವಾಗಿ ಏರಿಯಾದ ಎಲ್ಲ ಜವಾಬ್ದಾರಿಗಳನ್ನು ಅವನೇ ನಿಭಾಯಿಸುತ್ತಿರುತ್ತಾನೆ.

Advertisement

ಮರ್ಯಾದೆ ಪ್ರಶ್ನೆ’ ಕಥೆಯ ಒನ್‌ ಲೈನ್‌ ಏನು?

ಪಕ್ಕಾ ಮಿಡಲ್‌ ಕ್ಲಾಸ್‌ ಜನರ ಬದುಕಿನ ಕನ್ನಡಿ ಈ ಸಿನಿಮಾ. ಅವರ ಜೀವನದ ಏಳು-ಬೀಳುಗಳು ಇಲ್ಲಿವೆ. ತಮ್ಮದೇ ಸಣ್ಣ ಚೌಕಟ್ಟು ರಚಿಸಿ, ಅದರಲ್ಲೇ ಖುಷಿಯಿಂದ ಇರುತ್ತಾರೆ. ಆ ಚೌಕಟ್ಟಿಗೆ ಧಕ್ಕೆಯಾದಾಗ ಮರ್ಯಾದೆಯ ಪ್ರಶ್ನೆ ಎದುರಾಗುತ್ತದೆ. ಆ ಪ್ರಶ್ನೆ ಎನೆಂಬುದನ್ನು ಸಿನಿಮಾದಲ್ಲೇ ನೋಡಬೇಕು

ಚಿತ್ರದ ಪಾತ್ರಗಳು ನಿಮಗೆ ಹೇಗೆ ಆಪ್ತವಾಗಿವೆ?

ಈ ಚಿತ್ರದ ಎಲ್ಲಾ ಪಾತ್ರಗಳು ನನಗೆ ಬಹಳ ಆಪ್ತವಾಗಿದೆ. ಬಾಲ್ಯದಿಂದಲೂ ಈ ರೀತಿಯ ವ್ಯಕ್ತಿತ್ವಗಳನ್ನು ನೋಡಿಕೊಂಡೇ ಬೆಳೆದಿದ್ದೇನೆ. ಸಿನಿಮಾದ ಪಾತ್ರಗಳು ನನ್ನನ್ನು ಪ್ರಭಾವಿಸಿವೆ.

ಚಿತ್ರದ ಸಹ ಕಲಾವಿದರ ಬಗ್ಗೆ ನಿಮ್ಮ ಮಾತೇನು?

ಸುನೀಲ್‌, ಪೂರ್ಣಚಂದ್ರ, ತೇಜು ಬೆಳವಾಡಿ ಎಲ್ಲರೂ ಅತ್ಯುತ್ತಮ ಕಲಾವಿದರು. ಅವರೊಟ್ಟಿಗೆ ನಟಿಸುವಾಗ ಯಾವುದೇ ಗೊಂದಲ ಇರಲಿಲ್ಲ. ಪರಸ್ಪರ ಒಬ್ಬರೊಬ್ಬರನ್ನು ಅರ್ಥ ಮಾಡಿಕೊಂಡು ನಟಿಸಿದ್ದೇವೆ. ಎಲ್ಲರೂ ಪರಿಣಿತರೆ ಕೆಲಸ ಮಾಡಿರುವುದರಿಂದ ಸಿನಿಮಾ ಕೂಡ ಚೆನ್ನಾಗಿ ಬಂದಿದೆ. ಇದು ವಿಶೇಷ ಅನುಭವ.

ಸಖತ್‌ ಸ್ಟುಡಿಯೋ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಸಖತ್‌ ಸ್ಟುಡಿಯೋ ಹೊಸ ಟ್ರೆಂಡ್‌ ಸೆಟ್‌ ಮಾಡುವ ಸಂಸ್ಥೆಯಿದು. ಎಲ್ಲವನ್ನು ನಿಖರವಾಗಿ ಯೋಜನೆ ಮಾಡುತ್ತಾರೆ. ಇಡೀ ತಂಡ ಯೋಜನೆ ಹಂತದಲ್ಲಿ ಚೆನ್ನಾಗಿ ಕೆಲಸ ಮಾಡಿದೆ. ಹಾಗಾಗಿ ಶೂಟಿಂಗ್‌ ಸಮಯದಲ್ಲಿ ಯಾವುದೇ ತೊಂದರೆ ಆಗಲಿಲ್ಲ. ಶೂಟಿಂಗ್‌ ಮುನ್ನ ತರಬೇತಿ ನೀಡಿದ್ದರು. ಹೋಂ ವರ್ಕ್‌ ಬಹಳ ಇದ್ದಿದ್ದರಿಂದ ಶೂಟಿಂಗ್‌ ಕೂಡ ಸರಾಗವಾಗಿ ಆಯ್ತು.

ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next