ಕೊರಟಗೆರೆ: ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನ ಅವೈಜ್ಞಾನಿಕ ವಾಹನ ಚಾಲನೆಯಿಂದ ರೈತಾಪಿ ವರ್ಗ ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ಚಲಿಸಲು ಭಯ ಪಡುವಂತ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಸ್ಥಳೀಯ ರೈತರು ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ.
ತಾಲ್ಲೂಕಿನ ಚನ್ನರಾಯನ ದುರ್ಗ ಹೋಬಳಿಯ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಶಾರದ ಮಠದ ಸಮೀಪ ತೋವಿನಕೆರೆ ರಸ್ತೆಯಲ್ಲಿ 30 ಕ್ಕೂ ಹೆಚ್ಚು ಕ ಜಲ್ಲಿ ತುಂಬಿದ ಲಾರಿಗಳನ್ನು ತಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಾರಿಗೆ ಮತ್ತು ಪಿಡಬ್ಲ್ಯೂಡಿ ಇಲಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜುಂಜರಾಮನಹಳ್ಳಿ ಸ್ಥಳೀಯ ನಿವಾಸಿ ವಿರಣ್ಣ ಗೌಡ ಮಾತನಾಡಿ ಬಿಕ್ಕೆಗುಟ್ಟೆ ಕಲ್ಲ ಗಣಿಗಾರಿಕೆ ಪ್ರದೇಶದಿಂದ ತೋವಿನಕೆರೆ ಮಾರ್ಗವಾಗಿ ಪ್ರತಿನಿತ್ಯ ನೂರಾರು ಲಾರಿಗಳು ಚಲಿಸುತ್ತೀವೆ. ಬಾರದ ಮೀತಿ ಹೆಚ್ಚಾಗಿ ರಸ್ತೆ ಮತ್ತು ಸೇತುವೆ ಬಿರುಕು ಬಿಟ್ಟಿವೆ. ಜಲ್ಲಿ ಲಾರಿ ಮತ್ತು ಚಾಲಕರಿಗೆ ಪರವಾನಗಿ ಇಲ್ಲದೇ ವಾಹನ ಚಲಾಯಿಸುತ್ತಾರೆ. ಕಂದಾಯ ಮತ್ತು ಸಾರಿಗೆ ಇಲಾಖೆ ಮೌನಕ್ಕೆ ಹಲವು ಅನುಮಾನ ಮೂಡುತ್ತೀವೆ ಎಂದು ಆರೋಪಿಸಿದರು.
ಕುರಂಕೋಟೆಯ ಸ್ಥಳೀಯ ಮನೋಹರ್ ಮಾತನಾಡಿ ಬಿಕ್ಕೆಗುಟ್ಟೆ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ಶಬ್ದಕ್ಕೆ ಮನೆಗಳೆಲ್ಲಾ ಬಿರುಕು ಬಿಟ್ಟಿವೆ. ಜಲ್ಲಿ ವಾಹನದ ಮೇಲೆ ಟಾರ್ಪಲ್ ಮತ್ತು ನೀರು ಹಾಕದಿರುವ ಪರಿಣಾಮ ಹಿಂಬದಿ ಪ್ರಯಾಣಿಸುವ ದ್ವಿಚಕ್ರ ವಾಹನ ಸವಾರರ ಕಣ್ಣಿಗೆ ಕಲ್ಲಿನ ಚೂರುಗಳು ಹಾರಿ ಬಂದು ಬಿದ್ದಿವೆ. ಬಲಿಷ್ಟ ರಾಜ ಕಾರಣಿ ಹಾಗೂ ಸರ್ಕಾರದ ಶಕ್ತಿಯನ್ನು ಬಳಸಿಕೊಂಡು ಅಧಿಕಾರಿಗಳ ಮೂಲಕ ಜನ ಸಾಮಾನ್ಯರ ಮೇಲೆ ದಬ್ಬಾಳಿಕೆಯ ಪ್ರಯತ್ನ ನಡೆಯುತ್ತೀದೆ. ರೈತರ ಕೃಷಿ ಜಮೀನು ಮತ್ತು ಜಾನುವಾರುಗಳಿಗೆ ಸಂಕಷ್ಟ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿ ಸಾರಿಗೆ ಇಲಾಖೆಯ ಎಆರ್ ಟಿಒ ಸುಧಾ ಮಾತನಾಡಿ ಓವರ್ ಲೋಡ್ ತುಂಬಿಕೊಂಡು ಸಾಗಣೆ ಮಾಡುತ್ತೀದ್ದ 6 ಲಾರಿಗಳಿಗೆ ಪೈನ್ ಹಾಕಲಾಗಿದೆ. ಲಾರಿಗಳ ದಾಖಲೆ ಮತ್ತು ಚಾಲಕನ ಪರವಾನಗಿ ಇಲ್ಲದವರ ಮೇಲೆ ಪ್ರಕರಣ ದಾಖಲು ಮಾಡುತ್ತೇವೆ. ಮಧುಗಿರಿ ಕಛೇರಿ ಅವರಣದಲ್ಲಿ ಜಾಗದ ಸಮಸ್ಯೆ ಇರುವುದರಿಂದ ದಂಡ ಹಾಕಿ ಬಿಡಲಾಗಿದೆ. ಖಾಲಿ ವಾಹನಗಳ ದಾಖಲೆ ಪರೀಶೀಲನೆ ನಡೆಸಿ ಬಿಡುತ್ತೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮೋದಿ ಆಡಳಿತದಿಂದ ದೇಶಕ್ಕೆ ಹೊಸ ಶಕ್ತಿ: ರಾಘವೇಂದ್ರ
ಸ್ಥಳೀಯರು ಪ್ರತಿಭಟನೆ ನಡೆಸಿದಾಗ ನೆಪ ಮಾತ್ರಕ್ಕೆ ಸ್ಥಳಕ್ಕೆ ಬರುತ್ತೀರಾ. ರಾಜಕಾರಣಿಗಳ ಪರವಾಗಿ ಕೆಲಸ ಮಾಡುತ್ತೀರಾ. ಜನ ಸಾಮಾನ್ಯರು ತಪ್ಪು ಮಾಡಿದರೇ ನೀವು ಬೀಡ್ತಿರಾ. ನೀವು ಹೇಗೆ ಲಾರಿಗಳನ್ನು ಪರಿಶೀಲನೆ ನಡೆಸದೇ ಬೀಡ್ತಿರಾ. ಸಾರಿಗೆ ಇಲಾಖೆ ನಿಯಮವೇನು? ಬಡವರಿಗೆ ಒಂದು ನ್ಯಾಯನಾ ಶ್ರೀಮಂತರಿಗೆ ಒಂದು ನ್ಯಾಯನಾ. ಎಂದು ಶಾರದ ಮಠದ ತೋವಿನಕೆರೆ ರಸ್ತೆಯಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತೀದ್ದ ವೇಳೆ ಸಾರಿಗೆ ಇಲಾಖೆ ಸಿಬ್ಬಂದಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಮಂಜುನಾಥ್,ಶಿವಕುಮಾರ್, ದೊಡ್ಡಯ್ಯ,ಸಿದ್ದರಾಜು ,ನಟರಾಜು,ರಂಗರಾಜು, ಹನುಮಂತರಾಯಪ್ಪ,ಗೀರೀಶ್, ರಾಮಯ್ಯ, ಅನಂತರಾಜು,ಮೋಹನ್ ಕುಮಾರ್, ಕಾಂತರಾಜು, ರಾಜೇಶ್ ಸೇರಿದಂತೆ ಇತರರು ಇದ್ದರು.