Advertisement

ತೆಂಗು ಅಭಿವೃದ್ದಿ ಘಟಕ ಸ್ಥಾಪಿಸಲು ಡೀಸಿಗೆ ಮನವಿ

10:31 PM Jul 10, 2021 | Team Udayavani |

ತುರುವೇಕೆರೆ: ತಾಲೂಕಿನಲ್ಲಿ ತೆಂಗುಅಭಿವೃದ್ಧಿ ಘಟಕ ಸ್ಥಾಪಿಸಲುಜಿಲ್ಲಾಧಿಕಾರಿಗೆ 50 ಎಕರೆ ಜಮೀನನ್ನುದೊರಕಿಸಿಕೊಡುವಂತೆ ಮನವಿಮಾಡಲಾಗಿದೆ ಎಂದು ತೆಂಗು ಮತ್ತುನಾರು ಅಭಿವೃದ್ಧಿ ನಿಗಮ ನಿರ್ದೇಶಕ ಮಂಚೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಬಿಜೆಪಿ ನನ್ನನ್ನುಗುರುತಿಸಿ ಒಂದು ಮಹತ್ವದ ಹುದ್ದೆಯಅವಕಾಶವನ್ನು ನೀಡಿದೆ. ಈ ನಿರ್ದೇಶಕಸ್ಥಾನದ ಅವಕಾಶದ ಸದುಪಯೋಗದಪ್ರಯತ್ನ ಮಾಡುತ್ತಿದ್ದೇನೆ. ಕೇಂದ್ರಸರ್ಕಾರದ ತೆಂಗು ಮತ್ತು ನಾರುಅಭಿವೃದ್ಧಿ ನಿಗಮ ಹಾಗೂ ರಾಜ್ಯಸರ್ಕಾರದ ಸಣ್ಣ ಕೈಗಾಗಿಕಾವಲಯದಿಂದ ಸ್ಥಳೀಯ ತೆಂಗುಉತ್ಪನ್ನಗಳಿಗೆ ಮೌಲ್ಯವರ್ಧಿತಮಾರುಕಟ್ಟೆಯೊಂದಿಗೆ ನಿರುದ್ಯೋಗಿಯುವಕ-¿ ುುವ ತಿಯರಿಗೆಉದ್ಯೋಗ ಒದಗಿಸುವ ಸಂಕಲ್ಪಹೊಂದಲಾಗಿದೆ ಎಂದರು.

ಒಂದು ಜಿಲ್ಲೆ ಒಂದು ಉತ್ಪನ್ನಯೋಜನೆಯಡಿ ಜಿಲ್ಲೆಯನ್ನು ತೆಂಗುಉತ್ಪನ್ನಕ್ಕಾಗಿ ಗುರುತಿಸಲಾಗಿದ್ದು,ಜಿಲ್ಲೆಯಲ್ಲಿಯೇ ಪ್ರಮುಖ ವಾಣಿಜ್ಯಬೆಳೆಯಾದ ತೆಂಗು ಅದರಉತ್ಪನ್ನಗಳಾದ ಸೋಗೆ ಕಡ್ಡಿ, ತೆಂಗಿನಮಟ್ಟೆ, ಚಿಪ್ಪು ಈ ಉತ್ಪನ್ನಗಳಿಂದಗೃಹೋಪಯೋಗಿ ಹಾಗೂ ಕೈಗಾರಿಕಉತ್ಪನ್ನ ಪದಾರ್ಥಗಳನ್ನು ಉತ್ಪಾದಿಸಲುಉದ್ದೇಶಿಸಲಾಗಿದೆ. ಸೂಕ್ಷ, ಸಣ್ಣ ಮತ್ತುಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆಕೇಂದ್ರ ಸರ್ಕಾರ ಹಲವು ಆರ್ಥಿಕನೆರವುವನ್ನು ನಿರುದ್ಯೋಗಿಯುವಕರಿಗೆಘೋಷಿಸಿದೆ ಎಂದರು.

ಶೇ.40ರಷ್ಟು ಹಾಗೂ ಶೇ. 90ರಷ್ಟುಸಬ್ಸಿಡಿ ಸಹಾಯಧನದೊಂದಿಗೆಸ್ಥಾಪಿಸಬಹುದಾದ ಹಲವುಕೈಗಾರಿಕೆಗಳಿವೆ. ಈ ಎಲ್ಲ ಸಂಗತಿಗಳನ್ನುಒಳಗೊಂಡಂತೆ ಆಗಸ್ಟ್‌ ತಿಂಗಳಲ್ಲಿಪ್ರಾತ್ಯಕ್ಷಿಕೆಯೊಂದಿಗೆ ಒಂದು ವಿಚಾರಸಂಕೀರ್ಣವನ್ನು ತಾಲೂಕಿನಲ್ಲಿಹಮ್ಮಿಕೊಂಡು ಸೂಕ್ತ ಮಾಹಿತಿ,ಮಾರ್ಗದರ್ಶನ ನೀಡಲುನಿರ್ಧರಿಸಿದ್ದೇನೆ. ತಾಲೂಕಿನ ಯುವಜನತೆ ಸ್ಥಳೀಯ ಉತ್ಪನ್ನಗಳನ್ನುಒಳಗೊಂಡಂತೆ ಸಣ್ಣ-ಸಣ್ಣ ಕೈಗಾರಿಕೆಘಟಕ ಸ್ಥಾಪಿಸಿ ಸ್ವಾವಲಂಬನೆಯಬದುಕು ಜೊತೆಗೆ ಆರ್ಥಿಕ ಸದೃಢತೆಗೆನೆರವಾಗಲಿದೆ ಎಂದರು. ಸಿದ್ಧಾರ್ಥ,ಪ್ರಭಣ್ಣ, ಅಶೋಕ್‌, ಜಯರಾಮ್‌,ಕರಿಯಪ್ಪ, ಕೃಷ್ಣಪ್ಪ, ಎಚ್‌.ಎಲ್‌.ಕೃಷ್ಣಮೂರ್ತಿ, ಚಂದ್ರಾಪುರರಾಮಚಂದ್ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next