Advertisement
ರಫೆಲ್ಡ್ ಸ್ಲಿವ್ಸ್ ಶಾರ್ಟ್ ಸ್ಲಿವ್ಸ್ ಇಷ್ಟಪಡುವವರಾಗಲಿ, ನೀಳವಾದ ತೋಳುಗಳನ್ನೇ ಬಯಸುವವರಿಗಾಗಲಿ ಇದು ಚೆನ್ನಾಗಿ ಹೊಂದುತ್ತದೆ. ರಫೆಲ್ಡ್ ಸ್ಲಿವ್ಸ್ ನಲ್ಲಿ ಎರಡು ಬಗೆಯಿದೆ. ಒಂದರಲ್ಲಿ ಭುಜದ ಭಾಗದಲ್ಲೇ ಫ್ರಿಲ್ಸ್ ಗಳಿದ್ದರೆ, ಮತ್ತೂಂದರಲ್ಲಿ ಸ್ಲಿವ್ಸ್ ನ ಕೆಳಭಾಗದಲ್ಲಿ (ಬೆಲ್ ಸ್ಲಿವ್ಸ್) ಇರುತ್ತವೆ. ಇವೆರಡೂ ನಿಮಗೆ ಪರಿಪೂರ್ಣ ಲುಕ್ ಕೊಡುವುದರಲ್ಲಿ ಸಂಶಯವಿಲ್ಲ. ಇನ್ನು ನೀವು ಬಯಸಿದರೆ, ಪೂರ್ಣ ಸ್ಲಿವ್ಸ್ ಗೆ ಪದರ ಪದರಗಳಂತೆ ಬಟ್ಟೆಯನ್ನು ಜೋಡಿಸಿ ಹೊಸ ಪ್ರಯೋಗವನ್ನೂ ಮಾಡಬಹುದು.
ಕಚೇರಿಗೆ ಹೋಗುವವರಿಗೆ ರಫೆಲ್ಡ… ಶರ್ಟ್ ಒಳ್ಳೆಯ ಆಯ್ಕೆ. ಇದು ಕ್ಲಾಸಿ ಲುಕ್ ಕೊಡುತ್ತದೆ. ಶರ್ಟ್‌ನ ಕುತ್ತಿಗೆ ಭಾಗದಲ್ಲಿ ಅಥವಾ ಕಾಲರ್‌ನಲ್ಲಿ ಫ್ರಿಲ್ಸ್ ಇರುತ್ತದೆ. ಹತ್ತಿಪ್ಪತ್ತು ಮಂದಿಯ ನಡುವೆ ಡಿಫರೆಂಟ್ ಆಗಿ ಸ್ಮಾರ್ಟ್, ಕ್ಯಾಶುವಲ್ ಆಗಿ ಕಾಣಬೇಕೆಂದು ಬಯಸುವವರ ಮೊದಲ ಆಯ್ಕೆ ಇದೇ ಆಗಿರುತ್ತದೆ. ಟ್ರಾಸರ್
ಟ್ರಾಸರ್‌ಗಳಲ್ಲಂತೂ ಹೊಸ ಹೊಸ ಟ್ರೆಂಡ್‌ಗಳಿಗೆ ಬರವಿಲ್ಲ. ರಫೆಲ್ಡ… ಟ್ರಾಸರ್, ಕಾರ್ಪೊರೇಟ್ ಮಹಿಳೆಯರ ಗಮನ ಸೆಳೆಯುತ್ತಿದೆ. ಇದರ ಕೆಳಭಾಗದಲ್ಲಿ ಫ್ರಿಲ್ಸ್ ಗಳಿರುತ್ತವೆ. ಕೆಲವೊಂದರಲ್ಲಿ ಪ್ಯಾಂಟ್‌ನ ಮೇಲಿಂದ ಕೆಳತುದಿಯವರೆಗೂ ಪುಟ್ಟ ಪುಟ್ಟ ಫ್ರಿಲ್ಸ್ ಗಳು ಆವರಿಸಿದ್ದರೆ, ಇನ್ನು ಕೆಲವು ಟ್ರಾಸರ್‌ಗಳಲ್ಲಿ ತುದಿ ಭಾಗವಷ್ಟೇ ರಫೆಲ್ಡ್ ಆಗಿರುತ್ತದೆ. ಈಗೀಗ ತ್ರೀ ಫೋರ್ತ್ ಜೀನ್ಸ್, ಡೆನಿಮ್‌ಗಳಲ್ಲೂ ಈ ಟ್ರೆಂಡ್ ಕಾಣಿಸಿಕೊಳ್ಳತೊಡಗಿದೆ.
Related Articles
ರಫೆಲ್ಡ್ ಡ್ರೆಸ್‌ಗಳಲ್ಲಿ ಹಲವು ವಿಧಗಳಿವೆ. ಮುಖ್ಯವಾಗಿ, ಒನ್ ಶೋಲ್ಡರ್(ಒಂದು ಭುಜ ಕಾಣುವಂಥ) ಅಥವಾ ಆಫ್ ಶೋಲ್ಡರ್ (ಎರಡೂ ಭುಜಗಳು ಕಾಣುವಂಥ) ವೆರೈಟಿಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಕೇವಲ ಟಾಪ್‌ಗ್ಳನ್ನಷ್ಟೇ ಇಷ್ಟಪಡುವವರು ಮೂರು ನಾಲ್ಕು ಪದರಗಳುಳ್ಳ ಡ್ರೆಸ್‌ಅನ್ನು ಆಯ್ಕೆ ಮಾಡಬಹುದು. ಮಧ್ಯಭಾಗದಲ್ಲಿ, ಕೆಳತುದಿಯಲ್ಲಿ ಅಥವಾ ವಿ-ನೆಕ್‌ನ ಸುತ್ತಲೂ ಫ್ರಿಲ್ಸ್ ಗಳಿರುವ ಟಾಪ್‌ಗ್ಳೂ ಲಭ್ಯ. ಇನ್ನು ಉದ್ದಕ್ಕೂ ಫ್ರಿಲ್ಸ್ ಗಳೇ ತುಂಬಿ ತುಳುಕುತ್ತಿರುವ ಗೌನ್‌ಗಳೂ ಈಗಿನ ಟಾಪ್ ಟ್ರೆಂಡ್. ಮೇಲಿಂದ ಕೆಳಗಿನವರೆಗೂ ಉದ್ದನೆಯ ರಫೆಲ್ಡ್ ಉಡುಗೆ ತೊಟ್ಟು, ಡಿಸೈನರ್ ಬೆಲ್ಟ್ ಒಂದನ್ನು ತೊಟ್ಟು ಹೋದರೆ ಆಕರ್ಷಣೀಯವಾಗಿರುತ್ತದೆ.
Advertisement
ರಫೆಲ್ಡ್ ಬ್ಲೌಸ್ ಈ ಬಗೆಯಲ್ಲಿ ಸ್ಲಿವ್ ಲೆಸ್, ಶಾರ್ಟ್ ಸ್ಲಿವ್ ಹಾಗೂ ಲಾಂಗ್ ಸ್ಲಿವ್‌ಗಳಿರುವ ಬ್ಲೌಸ್‌ಗಳು ಬರುತ್ತವೆ. ಬೆನ್ನಿನ ಭಾಗದಲ್ಲಿ ಫ್ರಿಲ್ಸ್ ಇರುವಂಥ ಬ್ಲೌಸ್‌ಗಳೂ ಸಿಗುತ್ತವೆ. ಪ್ಲೇನ್ ಸೀರೆಗಳಿಗೆ ರಫೆಲ್ಡ್ ಬ್ಲೌಸ್ ಚೆನ್ನಾಗಿ ಸೂಟ್ ಆಗುತ್ತದೆ. ಅಂದ ಹಾಗೆ, ಈ ರಫೆಲ್ ಟ್ರೆಂಡ್ ಕೇವಲ ಉಡುಪುಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗೀಗ ಶೂಗಳು, ಹ್ಯಾಂಡ್ ಬ್ಯಾಗ್ ಗಳು, ಆಭರಣಗಳಲ್ಲೂ ರಫೆಲ್ ಪ್ಯಾಟರ್ನ್ಗಳನ್ನು ಕಾಣಬಹುದು. – ಹಲೀಮತ್ ಸಾ ಅದಿಯಾ