Advertisement
ಸಿಎಂಗೆ ಜಮೀರ್ ಯಾವಾಗ ಬತ್ತಿ ಇಡುತ್ತಾರೋ?: ವಕ್ಫ್ ವಿವಾದದ ಕುರಿತಾಗಿ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟಕ್ಕೆ ರಾಜ್ಯ ಬಿಜೆಪಿ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, “ವಕ್ಫ್ ಬೋರ್ಡ್ಗೆ ಕೊಟ್ಟ ಅಧಿಕಾರ ತೋಳದ ಬಳಿ ಕುರಿಮರಿ ನ್ಯಾಯ ಕೇಳುವಂತಾಗಿದೆ. ಇವತ್ತಿನ ಕಾಲಘಟ್ಟದಲ್ಲಿ ಕಾಂಗ್ರೆಸ್ ತಾನು ಷರೀಯಾ ಪರವೇ? ಸಂವಿಧಾನದ ಪರವೇ? ಎಂಬ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ರನ್ನು ನಂಬಿದ್ದಾರೆ. ಆದರೆ ಅವರು ಯಾವಾಗ ಬತ್ತಿ ಇಡುತ್ತಾರೆ ಗೊತ್ತಿಲ್ಲ, ಹೈದರಾಲಿಯ ನಂಬಿದ್ದ ಮೈಸೂರು ರಾಣಿ ಲಕ್ಷ್ಮಮ್ಮಣ್ಣಿ ಕೆಟ್ಟರು. ಅದೇ ಪರಿಸ್ಥಿತಿ ಸಿದ್ದರಾಮಯ್ಯ ಅವರದ್ದಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ ನಮ್ಮ ವಕ್ಫ್ ಬೋರ್ಡ್ಗೆ ಸೇರಿದ್ದು ಎಂದು ಹೇಳುತ್ತಾರೆ. ಕಾಂಗ್ರೆಸ್ ಕೊಟ್ಟ ಪರಮಾಧಿಕಾರದಿಂದ ಈ ಸೊಕ್ಕು ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಳೆ ವಿಧಾನಸೌಧ, ನಮ್ಮದು ಇಲ್ಲಿ ನಮಾಜ್ ಮಾಡಲು ಮಾತ್ರ ಅವಕಾಶ ಹೊರತು ಚರ್ಚೆ ಮಾಡುವ ಹಾಗಿಲ್ಲ ಎಂದರೆ ಸಿದ್ದರಾಮಯ್ಯ ಪಂಚೆ ಎತ್ತುಕೊಂಡು ಹೋಗಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
Related Articles
Advertisement
ಸಿದ್ದರಾಮಯ್ಯ ʼಕನ್ನದ ರಾಮಯ್ಯʼವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ ಸಿದ್ದರಾಮಯ್ಯನವರು ಅನ್ನ ನೀಡುವ ರೈತರ ಜಮೀನಿಗೆ ವಕ್ಫ್ ಬೋರ್ಡ್ನಿಂದ ನೋಟಿಸ್ ಕಳಿಸಿ ಕನ್ನ ಹಾಕಿದರು. ಬಡವರ ಬಿಪಿಎಲ್ ಕಾರ್ಡ್ಗೆ ಕನ್ನ ಹಾಕಿ ಅನ್ನ ಕಸಿದರು. ಆಸ್ಪತ್ರೆಗೆ ಕಾಯಿಲೆ ಬಂತು ಅಂತ ದಾಖಲಾದರೆ ಅಲ್ಲೂ ಲೂಟಿ ಮಾಡಿ ಕನ್ನ ಹಾಕಿದರು. ಸಿದ್ದರಾಮಯ್ಯ ರಾಜ್ಯದ ಬಡವರನ್ನು ವಸೂಲಿ ಮಾಡಿ ಕನ್ನ ಹಾಕುವ ಕನ್ನರಾಮಯ್ಯ ಎಂದು ವಾಗ್ದಾಳಿ ನಡೆಸಿದರು.