Advertisement

ಸಫಾರಿಯಲ್ಲಿ ಕಂಡ ಮೂರು ಹುಲಿಗಳು: ಮನಸೂರೆಗೊಂಡ ಪ್ರವಾಸಿಗರು

02:56 PM Mar 13, 2023 | Team Udayavani |

ಚಾಮರಾಜನಗರ: ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೆ. ಗುಡಿ (ಕ್ಯಾತದೇವರಗುಡಿ) ಯಲ್ಲಿ ಸೋಮವಾರ ಬೆಳಗಿನ ಸಫಾರಿ ಯಲ್ಲಿ ಪ್ರವಾಸಿಗರ ಸಫಾರಿ ವೇಳೆಯಲ್ಲಿ ಮೂರು ಹುಲಿಗಳು ಒಂದೇ ಸ್ಥಳದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದ್ದು, ಪ್ರವಾಸಿಗರು ಮನಸೂರೆಗೊಂಡಿದ್ದಾರೆ.

Advertisement

ಸೋಮವಾರ ಬೆಳಗಿನ ಕೆ. ಗುಡಿಯಲ್ಲಿ ಸಫಾರಿ ಹೋಗಿದ್ದ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನವಾಗಿರೋದು ತುಂಬಾ ವಿಶೇಷವಾಗಿದೆ. ಅನೇಕ ಬಾರಿ ಒಂದು ಹುಲಿ ಕಾಣಿಸಿಕೊಳ್ಳುವುದು ಕೂಡಾ ಕಷ್ಟ. ಆದರೆ, ಸೋಮವಾರ ಬೆಳಗಿನ ಸಫಾರಿಯಲ್ಲಿ ಮೂರು ವ್ಯಾಘ್ರಗಳು ಕಂಡಿರುವುದು ಅಪರೂಪವಾಗಿದೆ.

ಇದನ್ನೂ ಓದಿ:ಅವಿಭಜಿತ ಆಂಧ್ರ ಪ್ರದೇಶದ ಕೊನೆಯ ಸಿಎಂ ಕಿರಣ್‌ ಕುಮಾರ್‌ ರೆಡ್ಡಿಯಿಂದ ಕಾಂಗ್ರೆಸ್‌ಗೆ ಗುಡ್‌ಬೈ

ಈ ದೃಶ್ಯವನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರಿಕರಿಸಿದ್ದು, ಅದು ಎಲ್ಲೆಡೆ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next