ಮೈಸೂರು: ಪ್ರಜಾಪ್ರಭುತ್ವದ ದೇವಾಲಯಲ್ಲಿ ನಿನ್ನೆ ನಡೆದ ಘಟನೆ ಅವಮಾನಕರ. ಈ ಘಟನೆಗೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಸೇರಿದಂತೆ ಮೂರು ಪಕ್ಷಗಳು ಕಾರಣ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದಲ್ಲಿ ನಡೆಯತ್ತಿರುವ ಹಿಂದುಳಿದ ವರ್ಗಗಳ ರಾಜ್ಯಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಬುಧವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇದನ್ನೂ ಓದಿ:ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತು ಮಾಡಲಿ: ಸಚಿವ ಎಸ್ ಟಿ ಸೋಮಶೇಖರ್
ಇತಿಹಾಸ ಇರುವ ವಿಧಾನಪರಿಷತ್ ನಲ್ಲಿ ನಿನ್ನೆ ನಡೆದ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದರು.
ಈ ಹಿಂದೆ ಡಿ.ಎಚ್.ಶಂಕರಮೂರ್ತಿ ಸಭಾಪತಿಗಳಾಗಿದ್ದ ವೇಳೆ ಕಾಂಗ್ರೆಸ್ ನವರು ಅವಿಶ್ವಾಸ ತಂದು ಮತಕ್ಕೆ ಹಾಕಿದ್ದರು. ಈಗಲೂ ಅಂತಹದಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಕಾಂಗ್ರೆಸ್ ನವರು ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಹೇಳಿದರು.