Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ, 2016ರಲ್ಲಿ ಎರಡೂ ದೇಶಗಳ ನಡುವೆ ಮಾಡಿಕೊಂಡಿದ್ದ 59 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದದ ಪ್ರಕಾರ ಭಾರತಕ್ಕೆ ಫ್ರಾನ್ಸ್‌ನಿಂದ 36 ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಬರಬೇ ಕಿತ್ತು. ಬುಧವಾರ ಆಗಮಿಸಿರುವ ಮೂರು ವಿಮಾನಗಳು ಸೇರಿದಂತೆ ಈವರೆಗೆ 35 ಯುದ್ಧ ವಿಮಾನಗಳು ಭಾರತೀಯ ವಾಯು ಪಡೆಯನ್ನು ಸೇರ್ಪಡೆಗೊಂಡಿವೆ. ಇನ್ನೊಂದು ವಿಮಾನ ಸೇರ್ಪಡೆ ಬಾಕಿ ಯಿದ್ದು, ಮಾರ್ಚ್ ಅಥವಾ ಎಪ್ರಿಲ್ ಕೊನೆಯ ಭಾಗದಲ್ಲಿ ಹಸ್ತಾಂತರಗೊಳ್ಳುವ ನಿರೀಕ್ಷೆಯಿದೆ” ಎಂದು ತಿಳಿಸಿದೆ.
Related Articles
36 ರಫೇಲ್ ಯುದ್ಧ ವಿಮಾನಗಳ ಹಸ್ತಾಂತರಿಸುವ ಒಪ್ಪಂದ ಅಂತ್ಯಗೊಳ್ಳುತ್ತಿರುವ ಹೊತ್ತಿಗೆ ಭಾರತದೊಂದಿಗೆ ಹೊಸತೊಂದು ಒಪ್ಪಂದ ಮಾಡಿಕೊಳ್ಳಲು ಫ್ರಾನ್ಸ್ ಚಿಂತನೆ ನಡೆಸಿದೆ. ಭಾರತೀಯ ವಾಯುಪಡೆಗೆ 36 ಮಲ್ಟಿರೋಲ್ ಫೈಟರ್ ಜೆಟ್‌ಗಳನ್ನು (ಎಂಆರ್‌ಎಫ್ಎ) ಒದಗಿಸುವ ನಿಟ್ಟಿನಲ್ಲಿ ಮಾತುಕತೆಗಳು ಸಾಗಿವೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ವಾಯುಪಡೆಗೆ ಯುದ್ಧ ವಿಮಾನಗಳ 42 ಸ್ಕ್ವಾಡ್ರನ್‌ಗಳನ್ನು ನಿರ್ವಹಿಸಲು ಅವಕಾಶವಿದೆ. ಆದರೆ ವಾಯುಪಡೆ 32 ಸ್ಕ್ವಾಡ್ರನ್‌ಗಳನ್ನು ಮಾತ್ರ ಮುನ್ನಡೆಸುತ್ತಿದೆ. ಹಾಗಾಗಿ ಹೊಸ ಯುದ್ಧ ವಿಮಾನಗಳ ಸೇರ್ಪಡೆ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವಾಗಿದ್ದು, ಎಂಆರ್‌ಎಫ್ಎಗಳನ್ನು ಒದಗಿಸುವ ಹೊಸ ಒಪ್ಪಂದ ಮಾಡಿಕೊಳ್ಳಲು ಫ್ರಾನ್ಸ್-ಭಾರತ ಚಿಂತನೆ ನಡೆಸಿವೆ ಎನ್ನಲಾಗಿದೆ.
Advertisement