Advertisement

ಪುಲ್ವಾಮಾ: ಸೇನೆಯಿಂದ ಮೂವರು ಲಷ್ಕರ್‌ ಉಗ್ರರ ಹತ್ಯೆ;6 ಮಂದಿ ಪರಾರಿ

09:18 AM Jun 22, 2017 | |

ಶ್ರೀನಗರ : ಪುಲ್ವಾಮಾ ಜಿಲ್ಲೆಯ ಕಾಕಪೋರಾ ಎಂಬಲ್ಲಿ ಸೇನಾ ಪಡೆ ಬುಧವಾರ ಸಂಜೆಯಿಂದ ಭಾರೀ ಕಾರ್ಯಾಚರಣೆ ನಡೆಸಿ ಮೂವರು ಲಷ್ಕರ್‌ ಎ ತೋಯ್ಬಾ ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಸ್ಥಳದಲ್ಲಿ ಅಡಗಿದ್ದ 6 ಮಂದಿ ಉಗ್ರರು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

Advertisement

ಉಗ್ರರ ಇರುವಿಕೆಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಂಟಿ ಕಾರ್ಯಾಚರಣೆಗಿಳಿದ ಸೇನಾ ಪಡೆಗಳಿಗೆ ಸ್ಥಳೀಯ ಕೆಲ ಯುವಕರು ಕಲ್ಲು ತೂರಾಟ ನಡೆಸಿ ಅಡ್ಡಿ ಪಡಿಸಿದ್ದು, ಇದೇ ವೇಳೆ 6 ಮಂದಿ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ಹತ್ಯೆಗೀಡಾಗದ ಉಗ್ರರ ಬಳಿಯಿದ್ದ 3 ಎಕೆ 47 ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಉಗ್ರರ ವಿರುದ್ಧ ಸಿಆರ್‌ಪಿಎಫ್,ರಾಷ್ಟ್ರೀಯ ರೈಫ‌ಲ್ಸ್‌ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಪರಾರಿಯಾದ ಉಗ್ರರಿಗಾಗಿ ಭಾರೀ ಶೋಧ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next