Advertisement
ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೇಳ ನಡೆಯಲಿದ್ದು, 25 ರಾಷ್ಟ್ರಗಳ 400ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಮೂರು ದಿನದ ಮೇಳದಲ್ಲಿ ಪ್ರವಾಸೋದ್ಯಮ ವಹಿವಾಟಿಗೆ ಸಂಬಂಧಪಟ್ಟಂತೆ 12,000ಕ್ಕೂ ಹೆಚ್ಚು ಸಭೆ ನಡೆಯುವ ಸಾಧ್ಯತೆ ಇದೆ.
Related Articles
Advertisement
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಹಾಗೂ ದೇಶೀಯ 250 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು ಏಳು ಕೋಟಿ ರೂ. ವೆಚ್ಚದಲ್ಲಿ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಮುಖ್ಯವಾಗಿ ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು, ವೆಡ್ಡಿಂಗ್ ಪ್ಲಾನರ್, ಡೆಸ್ಟಿನೇಷನ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು, ಏರ್‌ಲೈನ್ಸ್, ಹೆಲಿಕಾಪ್ಟರ್ ಸೇವಾ ಸಂಸ್ಥೆಗಳು, ರೆಸಾರ್ಟ್ ಮಾಲೀಕರು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಾಪಾರ- ವಹಿವಾಟುದಾರರನ್ನು ಒಂದೇ ವೇದಿಕೆಯಡಿ ತಂದು ವ್ಯವಹಾರ ಸಂಬಂಧಿ ಮಾತುಕತೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
28 ತಾಣಗಳಿಗೆ ಸೆಳೆಯಲು ಚಿಂತನೆ: ರಾಜ್ಯದ ಎಲ್ಲ ಪ್ರವಾಸಿ ತಾಣಗಳಿಗೂ ವಿದೇಶಿಗರನ್ನು ಸೆಳೆಯಲು ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಯುನೆಸ್ಕೋ ಮಾನ್ಯತೆ ಪಡೆದಿರುವ ಐತಿಹಾಸಿಕ ತಾಣಗಳು, ವನ್ಯಜೀವಿ ತಾಣಗಳು, ಪಾರಂಪರಿಕ ಕಟ್ಟಡಗಳು ಸೇರಿದಂತೆ 28 ತಾಣಗಳತ್ತ ಪ್ರಮುಖವಾಗಿ ಸೆಳೆಯುವ ಚಿಂತನೆ ಇದೆ. ವಿದೇಶಿಗರು ಮಾತ್ರವಲ್ಲದೇ ಅನಿವಾಸಿ ಭಾರತೀಯರು, ಕನ್ನಡಿಗ ಪ್ರವಾಸಿಗರನ್ನು ಸೆಳೆಯಲು ಆದ್ಯತೆ ನೀಡಲಾಗಿದ್ದು, ಪೂರಕ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಟ್ರಾವೆಲ್ ಬ್ಲಾಗರ್ಗಳ ವಿನಿಮಯ: ರಾಜ್ಯದ ಪ್ರವಾಸಿ ತಾಣಗಳನ್ನು ವಿದೇಶೀ ಟ್ರಾವೆಲ್ ಬ್ಲಾಗರ್‌ಗಳು ವೀಕ್ಷಿಸಿ ಆ ಬಗ್ಗೆ ಬ್ಲಾಗ್‌ಗಳಲ್ಲಿ ಬರೆಯುವುದು. ಅದೇರೀತಿ ಸ್ಥಳೀಯ ಟ್ರಾವೆಲ್ ಬ್ಲಾಗರ್‌ಗಳು ಆ ದೇಶಕ್ಕೆ ತೆರಳಿ ಅಲ್ಲಿನ ಪ್ರವಾಸಿ ತಾಣಗಳ ಕುರಿತು ಬ್ಲಾಕ್‌ನಲ್ಲಿ ಬರೆಯುವ ವಿನಿಮಯ ಕಾರ್ಯಕ್ಕೂ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ನಾಡಿನ ಪ್ರವಾಸಿ ತಾಣಗಳನ್ನು ಪರಿಚಯಿಸಲು, ಉತ್ತೇಜಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಮಹಾಮಸ್ತಕಾಭಿಷೇಕಕ್ಕೂ ಪ್ರವಾಸಿಗರ ಆಕರ್ಷಣೆ: ಶ್ರವಣ ಬೆಳಗೊಳದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೂ ಪ್ರವಾಸಿಗರನ್ನು ಸೆಳೆಯಲು ಪ್ರಯತ್ನ ಆರಂಭಿಸಲಾಗಿದೆ. ಪ್ರವಾಸಿಗರನ್ನು ಸೆಳೆಯುವುದರಿಂದ ಸಂಬಂಧಪಟ್ಟ ಉದ್ಯಮಗಳು ಬೆಳವಣಿಗೆಯಾಗಲಿದ್ದು, ಆರ್ಥಿಕ ಪ್ರಗತಿಗೂ ಸಹಕಾರಿಯಾಗಲಿದೆ.
ಜತೆಗೆ ಸ್ಟಾರ್ಟ್‌ಅಪ್‌ಗ್ಳಿಗೂ ಉತ್ತೇಜಿಸಲಾಗುದು. ಒಟ್ಟಾರೆ ನಾಡಿನ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಆಲಂ ಖಾನ್, ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಅನಿಲ್ ಕುಮಾರ್, ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಇತರರು ಉಪಸ್ಥಿತರಿದ್ದರು.