ಈ ಬಾರಿ ಹೊಸ ಮುಖವನ್ನು ಕಣ ಕ್ಕಿಳಿಸುವ ಬಗ್ಗೆ ಈಗಾಗಲೇ ವರಿಷ್ಠರು ಬಹುತೇಕ ತೀರ್ಮಾನಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಆಕಾಂಕ್ಷಿ ಗಳ ಪಟ್ಟಿಯೂ ಬಹಳ ದೊಡ್ಡದಾಗಿದೆ. ಆದರೆ ವರಿಷ್ಠರು ಬೇರೆಯೇ ಮೂರು ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ ಎನ್ನುವ ಅಂಶ ಕುತೂಹಲಕ್ಕೆ ಕಾರಣವಾಗಿದೆ.
Advertisement
1989 ರ ಪ್ರಯೋಗ?ಪುತ್ತೂರಿನ ಬಿಜೆಪಿ ಪಾಳಯದಲ್ಲಿ ಎರಡು ಬಣಗಳ ರಾಜಕೀಯ ಮುಂದುವರಿದಿದೆ. ಹೀಗಾಗಿ ಯಾವುದೇ ಗುಂಪಿನವರಿಗೆ ಅವಕಾಶ ಕೊಟ್ಟರೆ ಸಮಸ್ಯೆ ಹೆಚ್ಚಾಗಲೂ ಬಹುದು. ಇದಕ್ಕಾಗಿ ಪರ್ಯಾಯ ದಾರಿಯಾಗಿ 1989 ರಲ್ಲಿನ ಪ್ರಯೋಗದ ಪುನರಾವರ್ತನೆಗೂ ವರಿಷ್ಠರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಮಂಗಳೂರಿನಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಕೇಳಿದ ಮೇಲೆ, ಹೈಕಮಾಂಡ್ ಮಟ್ಟದಲ್ಲೂ ಮೂರು ಹೆಸರುಗಳಿವೆ ಎಂದು ಪ್ರಸ್ತಾವಿಸಿದ್ದರಂತೆ. ಅವುಗಳಲ್ಲಿ ಸುಳ್ಯ ಭಾಗದವರ ಹೆಸರೂ ಸೇರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಜಾತಿ ಲೆಕ್ಕಾಚಾರದಲ್ಲಿ ಆಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಅಥವಾ ಪಕ್ಷದ ಲೆಕ್ಕದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಿದೆ.
Related Articles
ಹೊರ ಕ್ಷೇತ್ರದ ಅಭ್ಯರ್ಥಿಯನ್ನು ನಿಲ್ಲಿಸದೆ, ಕ್ಷೇತ್ರದ ಅಭ್ಯರ್ಥಿಗೆ ಮಣೆ ಹಾಕಬೇಕು ಎನ್ನುವ ಬಗ್ಗೆ ಈಗಾಗಲೇ ಪುತ್ತೂರು ಕ್ಷೇತ್ರದ ಮುಖಂಡರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ವರಿಷ್ಠರು ಹೇಗೆ ಮುಖಂಡರ ಮನವೊಲಿಸುವರು ಎಂಬುದು ಮುಂದಿರುವ ಬೆಳವಣಿಗೆಯಾಗಿದೆ.
Advertisement
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತವರು ಕ್ಷೇತ್ರವಾದ ಪುತ್ತೂರನ್ನು ಗೆಲ್ಲಲೆಬೇಕಾದ ಒತ್ತಡದಲ್ಲಿರುವ ಕಾರಣ ಅವರ ನಿರ್ಧಾರವನ್ನು ಸ್ಥಳೀಯ ಮುಖಂಡರು ಒಪ್ಪುವ ಅನಿವಾರ್ಯವೂ ಬರಬಹುದು ಎನ್ನಲಾಗಿದೆ.
ಬೆಂಬಲಿಗರ ಪ್ರಚಾರ ಬಿರುಸುಪುತ್ತೂರಿನ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗುತ್ತಿರುವ ಬೆನ್ನಲ್ಲೇ ಆಕಾಂಕ್ಷಿತರ ಬೆಂಬಲಿಗರು ಅಭ್ಯರ್ಥಿತನಕ್ಕೆ ಆಗ್ರಹಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿರುಸಿನ ಪ್ರಚಾರ, ಅಭಿಯಾನ ನಡೆಸುತ್ತಿದೆ.