Advertisement

ಒಂದೇ ಕುಟುಂಬದ ಮೂವರ ಸಾವು

11:45 AM Sep 22, 2017 | |

ಬೆಂಗಳೂರು: ಟಿಪ್ಪರ್‌ ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯ ಸೇಂಟ್‌ ಜಾನ್‌ ಜಂಕ್ಷನ್‌ ಬಳಿಯ ಪೆಟ್ರೋಲ್‌ ಬಂಕ್‌ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.

Advertisement

ಶ್ರೀರಾಮಪುರ ನಿವಾಸಿಗಳಾದ ಅಬ್ದುಲ್‌ ಕಲೀಲ್‌(34), ಪತ್ನಿ ಸುಲ್ತಾನಾ ಬೇಗಂ(28) ಮತ್ತು ಇವರ ಪುತ್ರ ಅಬ್ದುಲ್‌ ಸಾಹಿದ್‌(7) ಮೃತಪಟ್ಟವರು. ಈ ಸಂಬಂಧ ಟಿಪ್ಪರ್‌ ಚಾಲಕ ಅಶೋಕ್‌ ಕುಮಾರ್‌ನನ್ನು ಮಡಿವಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮಪುರದಲ್ಲಿ ಬಟ್ಟೆ ವ್ಯಾಪಾರ ನಡೆಸುವ ಅಬ್ದುಲ್‌ ಕಲೀಲ್‌ ಬುಧವಾರ ರಾತ್ರಿ ವ್ಯಾಪಾರ ಮುಗಿಸಿ ಕುಟುಂಬ ಸಮೇತ ಮಡಿವಾಳದಲ್ಲಿರುವ ಮಾವನ ಮನೆಗೆ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದರು.

ಈ ವೇಳೆ ವೇಗವಾಗಿ ಬಂದ ಲಾರಿ ಹೋಂಡಾ ಆಕ್ವಿವಾವನ್ನು ಹಿಂದಿಕ್ಕಲು ಯತ್ನಿಸಿ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಲಾರಿಯ ಹಿಂಬದಿ ಚಕ್ರ ಮೂವರ ಮೇಲೆ ಹರಿದಿದ್ದು, ಮಗು ಅಬ್ದುಲ್‌ ಸಾಹಿದ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಬ್ದುಲ್‌ ಕಲೀಲ್‌ ಮತ್ತು ಪತ್ನಿ ಸುಲ್ತಾನಾ ಬೇಗಂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಲ್ಮೆಟ್‌ಗಳು ಛಿದ್ರ ದಂಪತಿ ಹೆಲ್ಮೆಟ್‌ ಧರಿಸಿದ್ದರು.

ಆದರೆ, ಕೆಳಗೆ ಬಿದ್ದ ರಭಸಕ್ಕೆ ಲಾರಿಯ ಚಕ್ರ ಹರಿದಿದ್ದರಿಂದ ಹೆಲ್ಮೆಟ್‌ಗಳು ಛಿದ್ರವಾಗಿವೆ. ಮಗು ಅಬ್ದುಲ್‌ ಸಾಹಿದ್‌ ಕೂಡ ಹೆಲ್ಮೆಟ್‌ ಧರಿಸಿದ್ದ. ಆದರೆ, ಪ್ರಯೋಜನಕ್ಕೆ ಬಂದಿಲ್ಲ. ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಟಿಪ್ಪರ್‌ ಚಾಲಕ ಪರಾರಿಯಾಗುತ್ತಿದ್ದ. ಆದರೆ, ಸ್ಥಳೀಯರ ಸಮಯಪ್ರಜ್ಞೆಯಿಂದ ಆರೋಪಿಯನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next