Advertisement

ಉಡುಪಿಗೆ ಹೋಗಿ ಬಂದಿದ್ದ ಚಹಾದಂಗಡಿಯವ ಸೇರಿ ಗಂಗಾವತಿಯ ಮೂವರಿಗೆ ಸೋಂಕು ದೃಢ

02:09 PM Jun 16, 2020 | keerthan |

ಗಂಗಾವತಿ: ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್, ಮುಂಬೈನಿಂದ ಆಗಮಿಸಿದ ಕೋವಿಡ್ ಸೋಂಕಿತ ನಾಲ್ಕು ವರ್ಷದ ಮಗುವಿನ ತಂದೆ ಹಾಗೂ ಶ್ರೀರಾಮನಗರದ ಚಹಾದಂಗಡಿಯವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು ವಕೀಲಗೇಟ್ ಪ್ರದೇಶ, ವಡ್ಡರ ಓಣಿ 20ನೇ ವಾರ್ಡ್ ಹಾಗೂ ಶ್ರೀರಾಮನಗರದ ರಸ್ತೆ ಬದಿ ಪ್ರದೇಶವನ್ನು ಸೀಲ್ ಡೌನ್ ಮಾಡಿ ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

Advertisement

ನಗರದ ವಡ್ಡರ ಓಣಿಯಲ್ಲಿ ವಾಸವಾಗಿರುವ 34 ವರ್ಷದ ಸ್ಟಾಫ್ ನರ್ಸ್, ವಕೀಲ ಗೇಟ್ ಪ್ರದೇಶಕ್ಕೆ ಆಗಮಿಸಿದ ಕೋವಿಡ್-19 ಸೋಂಕಿತ ನಾಲ್ಕು ವರ್ಷದ ಮಗುವಿನ 38 ವರ್ಷದ ತಂದೆ ಹಾಗೂ ಶ್ರೀರಾಮನಗರದಲ್ಲಿ ಚಹಾದಂಗಡಿ ಇಟ್ಟುಕೊಂಡಿರುವ ಉಡುಪಿ ಮೂಲದ 48 ವರ್ಷದ ವ್ಯಕ್ತಿಗೆ ಕೊರೊನಾ ಪಾಜಿಟೀವ್ ಬಂದಿದೆ.

ವಕೀಲ ಗೇಟ್ ಪ್ರದೇಶಕ್ಕೆ ಮುಂಬೈನಿಂದ ಆಗಮಿಸಿದ್ದ 7 ಜನರನ್ನು ಕ್ವಾರಂಟೈನಲ್ಲಿರಿಸಲಾಗಿತ್ತು. ಇವರಲ್ಲಿ ಸೋಮವಾರ ನಾಲ್ಕು ವರ್ಷದ ಮಗುವಿಗೆ ಕೋವಿಡ್ ಸೋಂಕು ಕಂಡುಬಂದಿತ್ತು. ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಕಳೆದ ಹಲವು ದಿನಗಳಿಂದ ನೆಗಡಿ ಜ್ವರದಿಂದ ಬಳಲುತ್ತಿದ್ದು, ಆಕೆಯ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಶ್ರೀರಾಮನಗರದಲ್ಲಿ ಚಹಾದಂಗಡಿ ಇಟ್ಟುಕೊಂಡಿರುವ ವ್ಯಕ್ತಿ ಇತ್ತೀಚೆಗೆ ಉಡುಪಿಗೆ ಹೋಗಿ ಬಂದ ನಂತರ ನೆಗಡಿ ಸೀತ ಕೆಮ್ಮಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಆಗಮಿಸಿದ ವೇಳೆ ಕಫ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು.

ಕಲ್ಮಠ ಏರಿಯಾ, ಭಗೀರಥ ವೃತ್ತದಿಂದ ಬಿಟಿಎಚ್ ಲಾಡ್ಜ್ ಯಜ್ಞ ವಲ್ಕ್ಯ ಆಂಜನೇಯನ ಗುಡಿ ಕಂದಗಲ್ ಮಸೀದಿ ಪ್ರದೇಶ ಸೀಲ್ ಡೌನ್ ಮಾಡಿ ಕಂಟೋನ್ಮೆಂಟ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next