Advertisement

Kokkarne: ಮೂರು ಶತಮಾನಗಳ ಇತಿಹಾಸ ಪ್ರಸಿದ್ಧ ಹೊರ್ಲಾಳಿ ಕಂಬಳ

11:42 PM Dec 01, 2024 | Team Udayavani |

ಬ್ರಹ್ಮಾವರ: ಕೊಕ್ಕರ್ಣೆ ಸಮೀಪದ ಹೊರ್ಲಾಳಿ ಸಾಂಪ್ರದಾಯಿಕ ಕಂಬಳ ಉತ್ಸವಕ್ಕೆ ಸರಿ ಸುಮಾರು 300 ವರ್ಷಗಳ ಇತಿಹಾಸವಿದೆ. ಹೊರ್ಲಾಳಿ ದೊಡ್ಮನೆ ಕೇಚ – ರಾಹು ಕಂಬಳವೆಂದೇ ಪ್ರಸಿದ್ಧಿ ಪಡೆದಿದ್ದು, ಈ ಬಾರಿಯ ಕಂಬಳವು ಡಿ. 2ರಂದು ನಡೆಯಲಿದೆ.

Advertisement

ಐತಿಹಾಸಿಕ ಹೊರ್ಲಾಳಿ ಕಂಬಳವನ್ನು 3 ಶತಮಾನಗಳಿಂದಲೂ ಹೊರ್ಲಾಳಿ ದೊಡ್ಮನೆ ಮನೆತನದವರು ನಡೆಸಿಕೊಂಡು ಬರುತ್ತಿದ್ದಾರೆ. ಹೊರ್ಲಾಳಿ ದೊಡ್ಮನೆ ಮನೆತನದವರು ಕಂಬಳದ ದಿನ ಬೆಳಗ್ಗೆ ಇಲ್ಲಿನ ನಾಗ ಸಾನಿಧ್ಯ, ಪಂಜುರ್ಲಿ ಹಾಗೂ ಕೇಚ – ರಾಹು ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಶಿರೂರು ಹೊಳೆಬಾಗಿಲು ಗರಡಿಯ ಪ್ರಸಾದವನ್ನು ಸುಮಾರು ಕಂಬಳ ಗದ್ದೆಗೆ ಹಾಕಲಾಗುತ್ತದೆ.

ಆ ಬಳಿಕ ಪಾಣರ ನೃತ್ಯ, ಮಂಗಳ ವಾದ್ಯಗಳೊಂದಿಗೆ ಕಂಬಳ ಆರಂಭಗೊಳ್ಳುತ್ತದೆ.ಮಧ್ಯಾಹ್ನ ಆಗಮಿಸಿದ ಎಲ್ಲರಿಗೂ ಅನ್ನಸಂತರ್ಪಣೆ ಇಲ್ಲಿನ ವಿಶೇಷ.ಪ್ರತೀ ವರ್ಷ 40ಕ್ಕೂ ಮಿಕ್ಕಿ ಜೋಡಿ ಕೋಣಗಳು ಆಗಮಿಸುತ್ತವೆ. ಹಿಂದೆ ಕೇವಲ ಸಾಂಪ್ರದಾಯಿಕ ಕಂಬಳ ನಡೆಯುತ್ತಿತ್ತು. ಕಂಬಳವನ್ನು ಉತ್ತೇಜಿಸುವ ಸಲುವಾಗಿ ಕಳೆದ 5 ವರ್ಷಗಳಿಂದ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗುತ್ತದೆ.

ದೈವಿಕ ಆರಾಧನೆಯಾಗಿ, ಭಕ್ತಿಯ ಸ್ವರೂಪವಾಗಿ, ಕ್ರೀಡಾ ಮನೋಲ್ಲಾಸದ ಸಂಭ್ರದೊಂದಿಗೆ, ಜಾನಪದ ಸಂಸ್ಕೃತಿಯ ಪ್ರತೀಕವಾಗಿ ಈ ಕಂಬಳ ನಡೆದುಕೊಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next