Advertisement

Three arrested ; ಬಿಜೆಪಿಯ ನಿರಂತರ ಹೋರಾಟದ ಫಲ: ವಿಜಯೇಂದ್ರ

08:28 PM Mar 04, 2024 | Team Udayavani |

ಬೆಳಗಾವಿ: ಬಿಜೆಪಿಯ ನಿರಂತರ ಹೋರಾಟದ ಫಲವಾಗಿ ಸರಕಾರ ಈಗ ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಮೂವರನ್ನು ಬಂಧಿಸಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ’ ಪಾಕಿಸ್ಥಾನ ಜಿಂದಾಬಾದ್ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಘೋಷಣೆ ಕೂಗಿದವರನ್ನು ಬಂಧಿಸಿದ ತತ್ ಕ್ಷಣ ನ್ಯಾಯ ಸಿಕ್ಕಿದಂತಲ್ಲ. ಇದರಲ್ಲಿ ಭಾಗಿಯಾಗಿರುವ ಎಲ್ಲ ದೇಶದ್ರೋಹಿಗಳನ್ನೂ ಬಂಧಿಸಬೇಕು. ಇವರ ಹಿನ್ನೆಲೆ ಏನು? ವಿಧಾನಸೌಧದ ಒಳಗೆ ಘೋಷಣೆ ಕೂಗಲು ಪ್ರಚೋದನೆ ಕೊಟ್ಟವರು ಯಾರು? ಇವರ ಜತೆ ಯಾರೆಲ್ಲ ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಮುಖ್ಯಮಂತ್ರಿ ಮತ್ತು ರಾಜ್ಯ ಸರಕಾರವು ರಾಜ್ಯದ ಜನತೆಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

‘ವಿಪಕ್ಷಗಳ ಒತ್ತಾಯಕ್ಕೆ ಮಣಿದು ಮೂವರನ್ನು ಬಂಧಿಸಿದ ಮಾಹಿತಿ ಲಭಿಸಿದೆ. ಖಾಸಗಿ ಎಫ್‍ಎಸ್‍ಎಲ್ ವರದಿ ಮೂರು ದಿನಗಳಿಂದ ಹರಿದಾಡುತ್ತಿದೆ. ಅಧಿಕೃತ ಎಫ್‍ಎಸ್‍ಎಲ್ ವರದಿ ಲಭಿಸಿದ್ದರೂ ಕೂಡ ಅದನ್ನು ಬಹಿರಂಗಪಡಿಸದೆ ವಿಳಂಬ ಮಾಡಿರುವುದು ಸರಕಾರದ ಮೇಲೆ ಅನುಮಾನ ಬರುವಂತೆ ಮಾಡಿದೆ.ಇವರನ್ನು ಕೇವಲ ನಾಮಕಾವಾಸ್ತೆ ಬಂಧಿಸಿ ಒಳಗೆ ರಾಜಾತಿಥ್ಯ ಕೊಡುವ ಬದಲು ಸತ್ಯ ಏನೆಂದು ಸರಕಾರ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.

‘ಈಗ ಸಚಿವ ಸಂಪುಟದ ನಿಮ್ಮ ಸದಸ್ಯರು ಹಾಗೂ ಶಾಸಕರು ಪಾಕಿಸ್ಥಾನ ಜಿಂದಾಬಾದ್ ಎಂದು ಕೂಗಿದವರು ಅಮಾಯಕರು ಎಂದು ಒತ್ತಾಯ ತರಬಹುದು. ಆದ್ದರಿಂದ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂಥ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next