Advertisement

Dubai-Mangaluru ವಿಮಾನ ಪ್ರಯಾಣಿಕನ ದುರ್ವರ್ತನೆ; ವಿಮಾನದಿಂದ ಹಾರುವುದಾಗಿ ಬೆದರಿಕೆ!

01:00 AM May 11, 2024 | Team Udayavani |

ಮಂಗಳೂರು: ದುಬಾೖಯಿಂದ ಮಂಗಳೂರಿಗೆ ಬರುತ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಸಿಬಂದಿ ಜತೆ ಅನುಚಿತವಾಗಿ ವರ್ತಿಸಿ ವಿಮಾನ ದಿಂದ ಕೆಳಗೆ ಹಾರುವುದಾಗಿ ಬೆದರಿಕೆ ಒಡ್ಡಿರುವುದಾಗಿ ಬಜಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಮುಹಮ್ಮದ್‌ ಬಿ.ಸಿ. (24) ವಿರುದ್ಧ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸೆಕ್ಯೂರಿಟಿ ಕೋ- ಆಡಿನೇಟರ್‌ಆಗಿರುವ ಸಿದ್ಧಾರ್ಥದಾಸ್‌ ಬಜಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೇ 8ರಂದು ದುಬಾೖಯಿಂದ ಬರುತ್ತಿದ್ದ ಮುಹಮ್ಮದ್‌ ಅವರು ಸಹ ಪ್ರಯಾಣಿಕರಿಗೆ ವಿನಾಕಾರಣ ತೊಂದರೆ ನೀಡಿದ್ದಾರೆ. ನಿಲ್ದಾಣದ ಸಿಬಂದಿ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಮಾನದಿಂದ ಸಮುದ್ರಕ್ಕೆ ಹಾರುವುದಾಗಿ ಸಿಬಂದಿಗೆ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next