Advertisement
ಸಾವಿರ ರೂ.ಬಾಂಡ್ಇಲ್ಲಿನ ಶಾಲೆಗೆ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಸೇರಿದ ದಿನದಿಂದಲೇ ಸಾವಿರ ರೂ. ಬಾಂಡ್ ಕೊಡಲಾಗುತ್ತದೆ. ಆ ಮಗು 7ನೇ ತರಗತಿ ಪೂರ್ಣಗೊಳಿಸಿದ ಅನಂತರ ಅವರ ಆ ಒಂದು ಸಾವಿರ ರೂ.ಗಳ ಜತೆಗೆ ಬಡ್ಡಿ ಸಹಿತ ಹಣವನ್ನು ವಿದ್ಯಾರ್ಥಿಯ ಪೋಷಕರಿಗೆ ನೀಡಲಾಗುತ್ತದೆ.
ಸದ್ಯಕ್ಕೆ ಈ ಶಾಲೆಯಲ್ಲಿ 1ನೇ ತರಗತಿಯಿಂದ 9ನೇ ತರಗತಿವರೆಗೆ ಇರುವುದು ಒಬ್ಬರೇ ಶಿಕ್ಷಕರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ ಮಾತ್ರ ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡುತ್ತದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಳಗೊಳಿಸಿ ಶಿಕ್ಷಕರನ್ನು ಪಡೆಯುವ ಪ್ರಯತ್ನ ನಡೆಯುತ್ತಿದೆ. “ಬಾಂಡ್’ ರೂವಾರಿ ಕೆ.ಎಂ. ಉಡುಪ ನೀಲಾವರ
ಈ ಶಾಲೆ 1981ರಲ್ಲಿ ಸ್ಥಾಪನೆಯಾಗಿದ್ದು ಆ ಸಂದರ್ಭದಲ್ಲಿಯೇ ಕೆ.ಎಂ. ಉಡುಪ ಅವರು ಶಾಲಾಭಿವೃದ್ಧಿ ಸಮಿತಿಯಲ್ಲಿದ್ದರು. ನಿವೃತ್ತ ಬ್ಯಾಂಕ್ ಉದ್ಯೋಗಿಯಾದ ಇವರು ಲಕ್ಷಾಂತರ ರೂ. ವ್ಯಯಿಸಿ ಶಾಲೆಗೆ ಬಣ್ಣ ಬಳಿಯುವ ಹಾಗೂ ದುರಸ್ತಿ ಕೆಲಸವನ್ನು ಈಗಾಗಲೇ ಹಲವಾರು ಬಾರಿ ಮಾಡಿದ್ದಾರೆ. ಪಠ್ಯಪುಸ್ತಕಗಳನ್ನೂ ನೀಡುತ್ತಿದ್ದಾರೆ. ಈ ಬಾರಿಯಿಂದ 1ನೇ ತರಗತಿಗೆ ಸೇರುವ ಎಲ್ಲ ಮಕ್ಕಳಿಗೂ ಸ್ವತಃ ತಾವೇ ಸಾವಿರ ರೂ.ಗಳ ಬಾಂಡ್ ಮಾಡಿ ಅದನ್ನು ವಿದ್ಯಾರ್ಥಿಗಳಿಗೆ ನೀಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
Related Articles
ಹಲವಾರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದ ಈ ಶಾಲೆ ಮುಂದೆಯೂ ಇದೇ ರೀತಿ ಮುಂದುವರಿಯಬೇಕು. ಸರಕಾರಿ ಶಾಲೆಗಳನ್ನು ಉಳಿಸಲು ವಿದ್ಯಾರ್ಥಿಗಳ ಪೋಷಕರೂ ಹೆಚ್ಚಿನ ಆಸಕ್ತಿ ವಹಿಸಿ ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಗುಣಮಟ್ಟದ ಶಿಕ್ಷಣ ನೀಡುವ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು.
-ಸತ್ಯವತಿ ಬಿ.ಎಸ್. ಪ್ರಧಾನ ಶಿಕ್ಷಕರು (ಪ್ರಭಾರ)
Advertisement