Advertisement

Election ಗೆಲ್ಲೋಕೆ ಆಗದೇ ಇದ್ದವರು ರಾಜ್ಯಸಭೆಗೆ: ಮೋದಿ ಪರೋಕ್ಷ ವ್ಯಂಗ್ಯ

12:17 AM Apr 22, 2024 | Team Udayavani |

ಜೈಪುರ: “ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸಾಧ್ಯ ವಾಗದಿರುವವರು ರಾಜ್ಯಸಭೆ ಮೂಲಕ ಸಂಸತ್‌ ಪ್ರವೇಶಿಸುತ್ತಾರೆ’ ಎಂದು ಸೋನಿಯಾ ಗಾಂಧಿ ಹಾಗೂ ಮಾಜಿ ಪಿಎಂ ಮನಮೋಹನ್‌ ಸಿಂಗ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

Advertisement

ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯ ನ್ನುದ್ದೇಶಿಸಿ ರವಿವಾರ ಮಾತನಾಡಿರುವ ಅವರು, ರಾಜಸ್ಥಾನ ಕಾಂಗ್ರೆಸ್‌ ನಾಯಕರು ಗೆದ್ದು ಬರಲು ಪದೇ ಪದೆ ಸಹಾಯ ಮಾಡಿದೆ. ಕಾಂಗ್ರೆಸ್‌ ಮೊದಲಿಗೆ ದಕ್ಷಿಣದ ನಾಯಕ (ಕೆ.ಸಿ.ವೇಣು ಗೋಪಾಲ್‌)ನನ್ನು ಕರೆತಂದು ರಾಜಸ್ಥಾನದಿಂದ ರಾಜ್ಯಸಭೆಗೆ ಕಳುಹಿಸಲಾಯಿತು. ಬಳಿಕ ಮಾಜಿ ಪಿಎಂ ಮನ ಮೋಹನ್‌ ಸಿಂಗ್‌ ಅವರಿಗೂ ಬೆಂಬಲ ನೀಡಿತು. ಇದೀಗ ಮತ್ತೂಬ್ಬ ಕಾಂಗ್ರೆಸ್‌ ನಾಯಕರಿಗೂ (ಸೋನಿಯಾ) ಸಹಾಯ ಮಾಡಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಾಗದೇ ಇರುವವರು ರಾಜಸ್ಥಾನದ ಮೂಲಕ ಸಂಸತ್‌ ಪ್ರವೇಶಿಸುತ್ತಿದ್ದಾರೆ ಎಂದಿದ್ದಾರೆ.

ಅಲ್ಲದೇ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ಮುಂದುವರಿಸಿ, ಕಾಂಗ್ರೆಸ್‌ ಎಸಗಿದ ಪಾಪ ಕಾರ್ಯಗಳಿಂದಾಗಿ ದೇಶ ಇಂದು ಆ ಪಕ್ಷವನ್ನು ಶಿಕ್ಷಿಸುತ್ತಿದೆ. ಸ್ವತಃ ಕಾಂಗ್ರೆಸ್‌ಗೂ ಅದರ ಪರಿಸ್ಥಿತಿ ಬಗ್ಗೆ ಬೇಸರ ಹುಟ್ಟಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next