Advertisement

ತೋಕೂರು: ರಸ್ತೆಯಲ್ಲಿಯೇ ಹರಿಯುತ್ತಿದೆ ಚರಂಡಿ ನೀರು

11:31 AM Jul 08, 2018 | |

ತೋಕೂರು : ಇಲ್ಲಿನ ಪಡುಪಣಂಬೂರು ಗಾ.ಪಂ. ನ ತೋಕೂರು ದೇವಸ್ಥಾನದ ರಸ್ತೆಯಿಂದ ಎಸ್‌.ಕೋಡಿ ರಸ್ತೆಯಲ್ಲಿನ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು, ಈ ಪ್ರದೇಶದಲ್ಲಿ ಮಳೆ ನೀರೆಲ್ಲ ರಸ್ತೆಯಲ್ಲಿಯೇ ಹರಿಯುತ್ತಿದೆ. ಎಸ್‌. ಕೋಡಿ ಜಂಕ್ಷನ್‌ನಿಂದ ತೋಕೂರು ರಸ್ತೆಯಲ್ಲಿ ವಾಹನಗಳ ಸಂಚಾರವೂ ಸಹ ಹೆಚ್ಚಾಗಿದೆ. ಬೆಳ್ಳಾಯರು ಮುಡಾ ಕಾಲೋನಿಯ ರಸ್ತೆಯ ತಿರುವಿನಲ್ಲಿಯೂ ಈ ಸಮಸ್ಯೆ ಇದೆ. ಚರಂಡಿಗಳಲ್ಲಿ ಗಿಡಗಳು ಬೆಳೆದು ನೀರು ಚರಂಡಿ ಸೇರಲು ಅಡ್ಡಿಯಾಗಿದೆ.

Advertisement

ಸಂಚಾರಿಗಳು ವಾಹನಗಳ ಮೂಲಕ ಸಂಚರಿಸುವಾಗ ನೀರು ಹಾರಿ ಪಾದಚಾರಿಗಳಿಗೂ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿಕೊಂಡಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸೇರಿರುವ ಈ ರಸ್ತೆಯಲ್ಲಿನ ನಿರ್ವಹಣೆಯು ಸ್ಥಳೀಯ ಗ್ರಾಮ ಪಂಚಾಯತ್‌ ನಿರ್ವಹಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ನಾಗರಿಕರು ಆಗ್ರಹಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next