Advertisement
ಸುಳ್ಯದ ಸೀಮೆ ದೇವಾಲಯವಾದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲ ಯಕ್ಕೆ ಒಳಪಟ್ಟ ಮತ್ಸ್ಯತೀರ್ಥ ಹೊಳೆಯಲ್ಲಿ ಸಾವಿರಾರು ದೇವರ ಮೀನುಗಳಿವೆ. ಮಹಾವಿಷ್ಣು ಮತ್ಸ್ಯರೂಪ ತಾಳಿದ ಸ್ಥಳ ಇದಾಗಿದ್ದು, ಹರಕೆ ಹೇಳಿಕೊಂಡು ಮೀನುಗಳಿಗೆ ಆಹಾರ ಹಾಕಿದರೆ ಚರ್ಮ ರೋಗ ವಾಸಿಯಾಗುತ್ತದೆ ಎಂದು ನಂಬಿಕೆ ಸೀಮೆಯ ಭಕ್ತರ ಲ್ಲಿದೆ. ಇದರಿಂದ ನೂರಾರು ಭಕ್ತರು ಹರಕೆ ಹೊತ್ತು ಮೀನು ಗಳಿಗೆ ಆಹಾರ ಹಾಕುತ್ತಾರೆ.ತೊಡಿಕಾನ ಮಲ್ಲಿಕಾರ್ಜುನ ದೇವರ ಜಾತ್ರೆ ಎ. 13ರಿಂದ ಆರಂಭಗೊಂಡಿದ್ದು, ಎ. 20ರ ತನಕ ವಿವಿಧ ಸಾಂಸ್ಕೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜಾತ್ರೆ ಸಮಯದಲ್ಲಿ ಮತ್ಸ್ಯತೀರ್ಥ ಹೊಳೆಯಲ್ಲಿ ನೀರಿನ ಕೊರತೆಯಾಗಿ ದೇವರ ಮೀನುಗಳು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದವು. ಮೀನುಗಳಿಗೆ ಆಹಾರ ಹಾಕಲು ಭಕ್ತರಿಗೂ ಅವಕಾಶ ನೀಡುತ್ತಿರಲಿಲ್ಲ. ಹರಕೆ ರೂಪದಲ್ಲಿ ಬಂದ ಆಹಾರವನ್ನು ದೇವಸ್ಥಾನದಲ್ಲೇ ಸಂಗ್ರಹ ಮಾಡಿಕೊಂಡು, ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾದ ಮೇಲೆ ಸಿಬಂದಿಯೇ ನಿಗದಿತ ಪ್ರಮಾಣದಲ್ಲಿ ನೀಡುತ್ತಿದ್ದರು. ಈ ಬಾರಿ ಜಾತ್ರೆ ಸಂದರ್ಭ ಭಕ್ತರೇ ಮೀನುಗಳಿಗೆ ಆಹಾರ ಹಾಕುವ ಅವಕಾಶ ಸಿಗಲಿದೆ.
ಮೀನುಗಳಿಗೆ ಈ ಬಾರಿ ನೀರಿನ ಕೊರತೆಯಾಗಿಲ್ಲ. ನಾಲ್ಕು ಇಂಚು ನೀರನ್ನು ದೂರದ ದೇವರ ಗುಂಡಿ ಸಮೀಪದಿಂದ ಪೈಪ್ ಮೂಲಕ ತಂದು ಮೀನ ಗುಂಡಿಗೆ ಬಿಡಲಾಗುತ್ತಿದೆ. ಮಳೆ ಸುರಿದ ಹಿನ್ನೆಲೆಯಲ್ಲಿ ಮೀನಗುಂಡಿಯಲ್ಲಿ ಸಾಕಷ್ಟು ನೀರು ತುಂಬಿ ಹರಿದು ಹೋಗುತ್ತಿದೆ.
- ಆನಂದ ಕಲ್ಲಗದ್ದೆ,
ದೇವಸ್ಥಾನದ ವ್ಯವಸ್ಥಾಪಕರು
Related Articles
ತೊಡಿಕಾನ ದೇವರ ಮೀನುಗಳನ್ನು ನೋಡುವಾಗ ತುಂಬಾ ಖುಷಿಯಾಗುತ್ತದೆ.ಇವುಗಳು ತುಂಬಾ ಸುಂದರವಾಗಿವೆ.
ಮೀನುಗಳಿಗೆ ನೀರಿನ ಕೊರತೆಯಾಗದ ಹಾಗೆ ಶಾಶ್ವತ ವ್ಯವಸ್ಥೆ ಮಾಡಬೇಕಾಗಿದೆ.
– ಚರಣ್ ಕ್ಷೇತ್ರದ ಭಕ್ತ
Advertisement
ವಿಶೇಷ ವರದಿ-