ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
Advertisement
ರಾಜ್ಯದ ಬಹುತೇಕ ನಾಯ ಕರು ಬುಧವಾರ ಮತ್ತು ಗುರು ವಾರ ದಂದು ಹೊಸದಿಲ್ಲಿ ಪ್ರವಾಸ ಕೈಗೊಳ್ಳು ವರು. ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದ ಸ್ಯರೂ ಆಗಿರುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಸಂಜೆ, ಶಿವಮೊಗ್ಗ ದಿಂದ ಹೊರಟು ಹೈದರಾಬಾದ್ ಮೂಲಕ ದಿಲ್ಲಿ ತಲುಪಿದ್ದು, ಬುಧವಾರ ರಾಷ್ಟ್ರೀಯ ಬಿಜೆಪಿ ಕಚೇರಿ ಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವರು.
Related Articles
Advertisement
ಮೋದಿ, ಶಾ ತೀರ್ಮಾನದಿಲ್ಲಿಯಲ್ಲಿ ಬುಧವಾರ ಚುನಾವಣಾ ಸಮಿತಿ ಸಭೆ ನಡೆಯಲಿದೆ. ರಾಜ್ಯದ 28 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತೀರ್ಮಾನ ಕೈಗೊಳ್ಳಲಿದ್ದಾರೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ (ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ) ಮಹತ್ವವೇನು?
-ಈಗಾಗಲೇ ದಿಲ್ಲಿಗೆ ತಲುಪಿ ದ್ದಾರೆ ಬಿಎಸ್‌ವೈ. ಇಂದು ದಿಲ್ಲಿಯತ್ತ ತೆರಳಲಿರುವ ಇತರೆ ರಾಜ್ಯ ಬಿಜೆಪಿ ನಾಯಕರು
-ಬುಧವಾರ ಜೆ.ಪಿ. ನಡ್ಡಾ ಅಧ್ಯಕ್ಷತೆ ಯಲ್ಲಿ ಸಭೆ, ಗುರುವಾರ ಅಮಿತ್ ಶಾ ಉಪಸ್ಥಿತಿಯಲ್ಲಿ ಸಭೆ.
-ಶುಕ್ರವಾರ ಪ್ರಧಾನಿ ಮೋದಿ ಸಮ್ಮುಖದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ
-ವೀಕ್ಷಕರು ನೀಡಿರುವ 28 ಲೋಕಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆ ಚರ್ಚೆ.
-ರಾಜ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಅಂತಿಮಗೊಳಿಸುವ ಸಾಧ್ಯತೆ. -ಕಗ್ಗಂಟಾಗದೇ ಇರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ? ನಾಳೆ, ನಾಡಿದ್ದು ಕಾಂಗ್ರೆಸ್ ಸಭೆ
ಬೆಂಗಳೂರು: ಲೋಕ ಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ “ಕೈ’ ಪಡೆ, ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಅಂತಿಮಸ್ಪರ್ಶ ನೀಡುವ ಕಸರತ್ತು ನಡೆಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ವಾರಾಂತ್ಯದಲ್ಲಿ ಮೊದಲ ಪಟ್ಟಿ ಹೊರಬೀಳಲಿದೆ. ಕಾಂಗ್ರೆಸ್ ರಾಜ್ಯ ಉಸ್ತು ವಾರಿ ರಣದೀಪ್ ಸಿಂಗ್ ಸುಜೇì ವಾಲ ಬೆಂಗ ಳೂರು ಭೇಟಿ ಬೆನ್ನಲ್ಲೇ, ಅಭ್ಯರ್ಥಿ ಗಳ ಪಟ್ಟಿ ಸಿದ್ಧತೆ ಮತ್ತಷ್ಟು ಚುರುಕು ಗೊಂಡಿದೆ. ಈ ಸಂಬಂಧ ಇದೇ 7ರಂದು ರಾಜ್ಯ ನಾಯಕರ ಸಭೆ ನಡೆಯಲಿದೆ. ಅದರ ಮರುದಿನ ಮಾ. 8ರಂದು ಚುನಾ ವಣಾ ಸಮಿತಿ ಸಭೆ ದಿಲ್ಲಿ ಯಲ್ಲಿ ನಡೆಯ ಲಿದೆ. ಅಲ್ಲಿ ಬಹು ತೇಕ ಕ್ಷೇತ್ರ ಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ ಗೊಳ್ಳುವ ನಿರೀಕ್ಷೆ ಇದೆ. ಸುನೀಲ್ ಕನಗೋಳು, ಜಿಲ್ಲಾ ಉಸ್ತುವಾರಿಗಳು ಸೇರಿದಂತೆ ವಿವಿಧ ಹಂತಗಳ ಸಮೀಕ್ಷೆ ನಂತರ ಗರಿಷ್ಠ 2-3 ಸಂಭವನೀಯರ ಹೆಸರುಗಳು ಪಕ್ಷದ ನಾಯಕರ ಮುಂದಿವೆ. ಸೋಮವಾರ ಸುಜೇìವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲೂ ಈ ವಿಷಯ ಚರ್ಚೆಗೆ ಬಂದಿದೆ. ಅಲ್ಲಿ ಜಾತಿ ಸಮೀಕರಣ, ಹಣಬಲ, ಸ್ಥಳೀಯ ವರ್ಚಸ್ಸು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಬಣ ಮತ್ತಿತರ ಅಂಶಗಳನ್ನು ಅಳೆದು-ತೂಗಿ ಪಟ್ಟಿಯನ್ನು ದಿಲ್ಲಿಗೆ ಕಳುಹಿಸಲಾಗುತ್ತಿದೆ. ಮೊದಲ ಪಟ್ಟಿಯಲ್ಲಿ ಬಹುತೇಕ 20-22 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಬಹುದು ಎನ್ನುತ್ತವೆ ಮೂಲಗಳು. ಸಮೀಕ್ಷೆ ವರದಿಗಳ ಹೊರತಾಗಿಯೂ ಅಯೋಧ್ಯೆಯಲ್ಲಾದ ರಾಮಮಂದಿರ ಉದ್ಘಾಟನೆ, ಈಚೆಗೆ ವಿಧಾನಸೌಧದಲ್ಲಿ “ಪಾಕಿಸ್ತಾನ ಜಿಂದಾಬಾದ್ ಘೋಷಣೆ’, ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಹಲವು ಬೆಳವಣಿಗೆಗಳು ಅಭ್ಯರ್ಥಿಗಳ ಆಯ್ಕೆ ಮೇಲೆ ಪರಿಣಾಮ ಬೀರಿವೆ. ಈ ಎಲ್ಲ ಅಂಶಗಳನ್ನು ಕ್ರೋಢೀಕರಿಸಿ, ಪಟ್ಟಿ ಅಂತಿಮಗೊಳ್ಳಲಿದೆ. ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದ್ದು, ಅಲ್ಲಿಂದ ಅಭ್ಯರ್ಥಿಗಳಿಗೆ ಸಮಯಾವಕಾಶ ತುಂಬಾ ಕಡಿಮೆ ಇರಲಿದೆ. ಹಾಗಾಗಿ, ತ್ವರಿತ ಗತಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಹೈಕಮಾಂಡ್‌ನ ಲೆಕ್ಕಾಚಾರ. ಇನ್ನು ಕೆಲವೆಡೆ ಗೆಲುವುದು ತುಂಬಾ ಕಷ್ಟಸಾಧ್ಯ ಎನ್ನುವ ಹಾಗೂ ವಿಪಕ್ಷಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ 8-10 ಕ್ಷೇತ್ರಗಳನ್ನು ಈ ಮೊದಲು ಗುರುತಿಸಿ, ಅಲ್ಲೆಲ್ಲ ಸಚಿವರನ್ನು ಅಖಾಡಕ್ಕಿಳಿಸುವ ಆಲೋಚನೆ ಇತ್ತು. ಈಗ ಅದು ನೇಪಥ್ಯಕ್ಕೆ ಸರಿದಿದೆ. ಸಚಿವರು ತಮ್ಮ ಬದಲಿಗೆ ಆಪ್ತರು, ದೂರದ ಸಂಬಂಧಿಗಳಿಗೆ ಟಿಕೆಟ್ ಕೊಡಿಸಿ ಶತಾಯಗತಾಯ ಗೆಲ್ಲಿಸಿಕೊಂಡು ಬರುವುದಾಗಿ ನಾಯಕರಿಗೆ ಅಭಯ ನೀಡುತ್ತಿದ್ದಾರೆ ಎನ್ನಲಾಗಿದೆ. ಮಹತ್ವವೇನು?
-ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುಜೇìವಾಲ ಬೆಂಗಳೂರು ಭೇಟಿ ಬೆನ್ನಲ್ಲೇ, ಅಭ್ಯರ್ಥಿಗಳ ಪಟ್ಟಿ ಸಿದ್ಧತೆ ಕಾರ್ಯಕ್ಕೆ ಮತ್ತಷ್ಟು ವೇಗ.
-ಮಾ.7ರಂದು ರಾಜ್ಯ ನಾಯ ಕರ ಸಭೆ. ಮಾ.8ರಂದು ದಿಲ್ಲಿ ಯಲ್ಲಿ ನಡೆಯಲಿದೆ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ.
-ಜಾತಿ ಸಮೀಕರಣ, ಸ್ಥಳೀಯ ವರ್ಚಸ್ಸು ಮತ್ತಿತರ ಅಂಶಗಳನ್ನು ಅಳೆದು-ತೂಗಿ ಪಟ್ಟಿ ದೆಹಲಿಗೆ ರವಾನೆ.
-ಮೊದಲ ಪಟ್ಟಿಯಲ್ಲಿ ಬಹುತೇಕ 20-22 ಕ್ಷೇತ್ರ ಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ನಿರೀಕ್ಷೆ.