Advertisement

Muslim Leaders; ಮುಸ್ಲಿಂ ನಾಯಕರಿಂದ ಗೃಹ ಸಚಿವ ಅಮಿತ್‌ ಶಾ ಭೇಟಿ

09:16 PM Apr 05, 2023 | Team Udayavani |

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆಗೆ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಮಂಗಳವಾರ ರಾತ್ರಿ ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Advertisement

ಜಮಿಯತ್‌ ಉಲೇಮ ಇ-ಹಿಂದ್‌ ಅಧ್ಯಕ್ಷ ಮೌಲಾನ ಮೆಹೂ¾ದ್‌ ಮದನಿ, ಕಾರ್ಯದರ್ಶಿ ನಿಯಾಜ್‌ ಫಾರೂಖೀ, ಭಾರತೀಯ ಮುಸ್ಲಿಮ್‌ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಕಮಲ್‌ ಫಾರೂಖೀ, ಪ್ರೊ.ಅಖ್ತರುಲ್‌ ವಸೆ ಇದ್ದ ತಂಡ ಶಾರನ್ನು ಭೇಟಿ ಮಾಡಿ 14 ಸಮಸ್ಯೆಗಳನ್ನು ಅಮಿತ್‌ ಶಾ ಮುಂದಿಟ್ಟಿತು. ಭೇಟಿಯ ನಂತರ ಪ್ರತಿಕ್ರಿಯಿಸಿದ ನಿಯಾಜ್‌ ಫಾರೂಖೀ, ರಾಜಕೀಯ ಭಾಷಣಗಳನ್ನು ಮಾಡುವ ಅಮಿತ್‌ ಶಾಗಿಂತ ಬೇರೆಯದ್ದೇ ವ್ಯಕ್ತಿ ನಮಗಲ್ಲಿ ಕಾಣಿಸಿದರು. ಅವರು ನಾವು ಹೇಳಿದ್ದನ್ನೆಲ್ಲ ತಾಳ್ಮೆಯಿಂದ ಕೇಳಿಸಿಕೊಂಡು ಧನಾತ್ಮಕವಾಗಿ ಪ್ರತಿಕ್ರಿಯಿಸಿದರು. ಮಾತ್ರವಲ್ಲ ಯಾವುದೇ ದುರ್ಘ‌ಟನೆಗಳಲ್ಲಿ ಸರ್ಕಾರದ ಪಾತ್ರವಿಲ್ಲ ಎಂದಿದ್ದಾರೆ ಎಂದು ಹೇಳಿದ್ದಾರೆ.

ರಾಮನವಮಿ ದಿನ ಪ.ಬಂಗಾಳ, ಮಹಾರಾಷ್ಟ್ರ, ಬಿಹಾರದಲ್ಲಿ ನಡೆದ ಘಟನೆಗಳನ್ನೂ ಈ ವೇಳೆ ಮುಸ್ಲಿಂ ನಾಯಕರು ಶಾ ಗಮನಕ್ಕೆ ತಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next