Advertisement

ಇದು ಪಾರ್ಟಿ ಪೋಸ್ಟರ್‌ ಅಲ್ಲ.. ಮದುವೆ ಆಮಂತ್ರಣ!

07:26 PM Nov 15, 2021 | Team Udayavani |

ಲಕ್ನೋ: ರಾಜಕೀಯ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳ ಆಮಂತ್ರಣಗಳಲ್ಲಿ ರಾಜಕೀಯ ನಾಯಕರ ಫೋಟೋಗಳಿರುತ್ತವೆ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮದುವೆ ಆಮಂತ್ರಣದಲ್ಲೂ ಬರೀ ರಾಜಕಾರಣಿಗಳ ಫೋಟೋ ಹಾಕಲಾಗಿದೆ!

Advertisement

ಪ್ರತಾಪಗಢ ಜಿಲ್ಲೆಯ ಅಭಿಷೇಕ್‌ ಸರೋಜ್‌ ನ.20ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಆಮಂತ್ರಣ ಪತ್ರವೂ ಸಿದ್ಧವಾಗಿದೆ. ಆದರೆ ಅಭಿಷೇಕ್‌ರ ಸಹೋದರ ಸಮಾಜವಾದಿ ಪಕ್ಷದ ಅಖೀಲೇಶ್‌ ಯಾದವ್‌ರ ಅಭಿಮಾನಿಯಾಗಿರುವ ಕಾರಣ ಆಮಂತ್ರಣ ಪತ್ರವನ್ನು ವಿಶೇಷವಾಗಿ ಮಾಡಿಸಲಾಗಿದೆ.

ಪಕ್ಷದ ಬಣ್ಣವಾದ ಕೆಂಪು, ಹಸಿರು ಬಣ್ಣದಲ್ಲೇ ಇರುವ ಆಮಂತ್ರಣ ಪತ್ರಿಕೆಯಲ್ಲಿ ಅಖೀಲೇಶ್‌, ಮುಲಾಯಂ ಸಿಂಗ್‌ ಫೋಟೋ, ಅವರ ಆಡಳಿತಾವಧಿಯಲ್ಲಿ ಜಾರಿಯಾದ ಯೋಜನೆಗಳ ಫೋಟೋಗಳನ್ನು ಮುದ್ರಿಸಲಾಗಿದೆ.

ಇದನ್ನೂ ಓದಿ:ಗಡಿಯಲ್ಲಿ ವಿಫಲ: ಭಾರತದ ವಿರುದ್ಧ ಪಿತೂರಿಗೆ ಚೀನಾ ಹೊಸ ಮಾರ್ಗ?

ಕೊನೆಯಲ್ಲಿ “ಕೆಲಸ ಮಾತನಾಡುತ್ತದೆ’ ಎಂದೂ ಬರೆಯಲಾಗಿದೆ. ವಿಶೇಷವೆಂದರೆ ಈ ಆಮಂತ್ರಣವನ್ನು ಸ್ಥಳೀಯ ಬಿಜೆಪಿ ನಾಯಕರಿಗೂ ನೀಡಲಾಗಿದ್ದು, ಅವರೆಲ್ಲರೂ ಅದನ್ನು ನಗುತ್ತಾ ಸ್ವೀಕರಿಸಿದ್ದಾರಂತೆ!

Advertisement

 

Advertisement

Udayavani is now on Telegram. Click here to join our channel and stay updated with the latest news.

Next