Advertisement
ಕಾಳಿ ನದಿಗೆ ಜೊಯಿಡಾದ ಬಳಿ ಸುಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಕೊಡಸಳ್ಳಿ, ಕದ್ರಾ ಬಳಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಆ ಪೈಕಿ ತಟ್ಟಿಹಳ್ಳ ಮತ್ತು ಬೊಮ್ಮನಹಳ್ಳಿ ಜಲಾಶಯಗಳು ಪಿಕ್‌ಅಪ್ ಡ್ಯಾಂಗಳು. ಸುಪಾ ಜಲಾಶಯವೇ ಕಾಳಿ ನದಿಯ ಮೊದಲ ಜಲಾಶಯ.
Related Articles
Advertisement
ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ: ಈ ವರ್ಷದ ಮಾರ್ಚ್ ವೇಳೆಗೆ 2.227 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗಿದ್ದು, ನಿಗದಿತ ಗುರಿಗಿಂತ ಹೆಚ್ಚೇ ವಿದ್ಯುತ್ ಉತ್ಪಾದಿಸಲಾಗಿದೆ. ಈಗ ರಾಜ್ಯದ ಬೇಡಿಕೆಗೆ ಅನುಗುಣವಾಗಿ ದಿನವೂ 8 ರಿಂದ 9 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಜಲಾಶಯಗಳಲ್ಲಿ ಮುಂಗಾರು ಬರುವ ತನಕ ಅಗತ್ಯ ನೀರಿನ ಸಂಗ್ರಹವಿದೆ.
ಕಾಳಿ ನದಿಯ ಮೂಲ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಆಶಾದಾಯಕವಾಗಿದೆ. 2018ರ ಏಪ್ರಿಲ್ 30ಕ್ಕೆ 536.20 ಮೀಟರ್ ಜಲಸಂಗ್ರಹ ಜಲಾಶಯದಲ್ಲಿತ್ತು. 2019ರ ಏ.30ರಂದು 537.20 ಮೀಟರ್ ನೀರಿನ ಸಂಗ್ರಹವಿದ್ದು, ರಾಜ್ಯದ ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಸಾಧ್ಯವಿದೆ ಎಂದು ಕಾಳಿ ಜಲ ವಿದ್ಯುತ್ ಯೋಜನೆಗಳ ಮುಖ್ಯ ಎಂಜಿನಿಯರ್ (ಎಲೆಕ್ಟ್ರಿಕಲ್ ವಿಭಾಗ) ನಂಜುಂಡೇಶ್ವರ “ಉದಯವಾಣಿ’ಗೆ ತಿಳಿಸಿದ್ದಾರೆ.
ಕೊಡಸಳ್ಳಿ ಜಲಾಶಯ 75.5 ಮೀಟರ್ ಎತ್ತರವಿದ್ದು, 2018ರಲ್ಲಿ ಜಲಾಶಯದಲ್ಲಿ 72.70 ಮೀಟರ್‌ನಷ್ಟು ನೀರಿನ ಸಂಗ್ರಹವಿತ್ತು. ಪ್ರಸಕ್ತ ವರ್ಷ 70.25 ಮೀಟರ್‌ನಷ್ಟಿದೆ. ಕದ್ರಾ ಜಲಾಶಯದಲ್ಲಿ ಪ್ರಸಕ್ತ ವರ್ಷ 30.25 ಮೀಟರ್‌ವರೆಗೆ ನೀರಿನ ಸಂಗ್ರಹವಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟ 34.50 ಮೀಟರ್. ಕಳೆದ ವರ್ಷ ಜಲಾಶಯದಲ್ಲಿ 30.10 ಮೀಟರ್ ನೀರಿನ ಸಂಗ್ರಹವಿತ್ತು. ಎಲ್ಲಾ ಕಾಳಿ ಜಲಾಶಯಗಳಿಗೆ ಮೂಲ, ಸುಪಾ ಅಣೆಕಟ್ಟು. ಅಲ್ಲಿಂದ ಹೊರ ಬಿಟ್ಟ ನೀರನ್ನು 3 ಹಂತಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎನ್ನುತ್ತಾರೆ ಕರ್ನಾಟಕ ಪವರ್ ಕಾರ್ಪೊರೇಶನ್‌ನ ಅಧಿಕಾರಿಗಳು.
ಕದ್ರಾ, ಕೊಡಸಳ್ಳಿ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಜಲ ಸಂಗ್ರಹ ಚೆನ್ನಾಗಿದೆ. ಸುಪಾ ಜಲಾಶಯದಲ್ಲಿ ಸಹ ಉತ್ತಮ ರೀತಿಯಲ್ಲಿ ನೀರಿನ ಸಂಗ್ರಹವಿದೆ. ಇದಕ್ಕೆ ಕಾರಣ 2018ರಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿದ್ದು. ಜಲಾಶಯ ತುಂಬಿದ ಕಾರಣ ವಿದ್ಯುತ್ ಉತ್ಪಾದನೆಯಲ್ಲಿ ಸಹ ಗುರಿ ಮೀರಿದ ಪ್ರಗತಿ ಸಾಧಿಸಲಾಗಿದೆ.-ಶಿವಪ್ರಸಾದ್, ಕಾರ್ಯನಿರ್ವಾಹಕ ಎಂಜಿನಿಯರ್, ಅಣೆಕಟ್ಟು ವಿಭಾಗ, ಕದ್ರಾ ಕೊಡಸಳ್ಳಿ, ಉತ್ತರ ಕನ್ನಡ. ರಾಜ್ಯದ ಬೇಡಿಕೆಗೆ ಅನುಗುಣವಾಗಿ ದಿನವೂ 9 ರಿಂದ 10 ಮಿಲಿಯನ್ ಯೂನಿಟ್ಸ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯಲ್ಲಿ ಏರಿಳಿತ ಇರುತ್ತದೆ. ಜಲಾಶಯದಲ್ಲಿ ಈ ಬಾರಿ ನೀರಿನ ಕೊರತೆಯಿಲ್ಲ.
-ನಂಜುಂಡೇಶ್ವರ, ಮುಖ್ಯ ಎಂಜಿನಿಯರ್, (ಎಲೆಕ್ಟ್ರಿಕಲ್ ವಿಭಾಗ) ನಾಗಝರಿ. ಕೆಪಿಸಿ, ಅಂಬಿಕಾನಗರ. * ನಾಗರಾಜ ಹರಪನಹಳ್ಳಿ