ವಿಶ್ವಕಪ್ ಫುಟ್‌ಬಾಲ್ ಕೂಟಗಳಲ್ಲಿ ಚೆಂಡುಗಳದ್ದೇ ದೊಡ್ಡ ಇತಿಹಾಸವಿದೆ. ಕಾಲದಿಂದ ಕಾಲಕ್ಕೆ ಇವು ಬದಲಾಗುತ್ತಲೇ ಬಂದಿವೆ. ಈ ಬಾರಿ “ಟೆಲ್‌ಸ್ಟಾರ್ 18′ ಚೆಂಡಿನ ಮ್ಯಾಜಿಕ್ ನಡೆಯಲಿದೆ. ಈ ಚೆಂಡನ್ನು ಮಾಸ್ಕೊ ವಿಶ್ವಕಪ್ ಪಂದ್ಯಾವಳಿಗೆಂದೇ ಖ್ಯಾತ “ಅಡಿಡಾಸ್ ಕಂಪೆನಿ’ ವಿಶೇಷವಾಗಿ ತಯಾರಿಸಿದೆ. ಶನಿವಾರ ಇದನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ವಿಶೇಷವೆಂದರೆ, ಈ ಚೆಂಡು ತಯಾ ರಾದದ್ದು ಪಾಕಿಸ್ಥಾನದ ಸಿಯಾಲ್‌ಕೋಟ್‌ನಲ್ಲಿ. ವಿಶ್ವಕಪ್‌ನಲ್ಲಿ ಪಾಕಿಸ್ಥಾನ ಪಾಲ್ಗೊಳ್ಳದೇ ಹೋದರೂ ಪಾಕಿಸ್ಥಾನ ನಿರ್ಮಿತ ಚೆಂಡು ವಿಶ್ವದ ಈ ಮಹಾನ್ ಕ್ರೀಡಾಕೂಟದಲ್ಲಿ ದೊಡ್ಡ ಪಾತ್ರ ವಹಿಸುತ್ತಿರುವುದೊಂದು ಹೆಚ್ಚುಗಾರಿಕೆಯೇ ಸೈ!
“ಟೆಲ್‌ಸ್ಟಾರ್ 18′ ಚೆಂಡು ಉನ್ನತ ತಂತ್ರಜ್ಞಾನ ಹಾಗೂ ಅತ್ಯಂತ ಆಕರ್ಷಕ ವಾಗಿ ರೂಪಿಸಲಾಗಿದ್ದು, ಫಿಫಾ ವಿಶ್ವಕಪ್ ಇತಿಹಾಸದ ಹಿಂದಿನೆಲ್ಲ ಮಾದರಿಗಳಿಗಿಂತ ಭಿನ್ನವಾಗಿದೆ. ಇದನ್ನು ಪೀಲೆ, ಗೆರ್ಡ್ ಮುಲ್ಲರ್, ಬಾಬ್ಬಿ ಮೂರ್, ಪೆಡ್ರೊ ರೋಕ ಮೊದಲಾದ ಫುಟ್‌ಬಾಲ್ ಲೆಜೆಂಡ್‌ಗಳು ದಶಕಗಳ ಹಿಂದೆ ಆಡಿದ ಚೆಂಡಿಗೆ ಹೋಲಿಸಲಾಗುತ್ತಿದೆ.
“ಈ ಚೆಂಡಿನ ಬಗ್ಗೆ ಮುಂಚಿತವಾಗಿ ಸ್ವಲ್ಪ ತಿಳಿಯು ವಂತಾದದ್ದು ಒಳ್ಳೆಯದೇ ಆಯಿತು. ನಾನಿದನ್ನು ಹೇಗೆ ನಿಭಾಯಿಸ ಬೇಕೆಂದು ಯೋಜನೆ ರೂಪಿಸಬಹು ದಾಗಿದೆ’ ಎಂದಿದ್ದಾರೆ, ಟೆಲ್‌ಸ್ಟಾರ್ 18 ಚೆಂಡನ್ನು ವೀಕ್ಷಿಸಿದ ಆರ್ಜೆಂಟೀನಾದ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ!
ಸಿಯಾಲ್‌ಕೋಟ್
ಪಾಕಿಸ್ಥಾನದ ಸಿಯಾಲ್‌ಕೋಟ್‌ಗೆ ಫುಟ್‌ಬಾಲ್ ನಿರ್ಮಾಣದಲ್ಲಿ ಜಗತ್ತಿನಲ್ಲೇ ವಿಶೇಷ ಸ್ಥಾನವಿದೆ. ಇಲ್ಲಿನ ವಿವಿಧ ಫ್ಯಾಕ್ಟರಿಗಳಲ್ಲಿ ವರ್ಷಕ್ಕೆ 40ರಿಂದ 60 ಮಿಲಿಯನ್‌ನಷ್ಟು ಫುಟ್‌ಬಾಲ್‌ಗಳನ್ನು ತಯಾರಿಸಲಾಗುತ್ತದೆಂಬುದೇ ಒಂದು ಅಚ್ಚರಿ. ಇವೆಲ್ಲದಕ್ಕೂ ವಿಶಾಲವಾದ ಜಾಗತಿಕ ಮಾರುಕಟ್ಟೆ ಇದೆ.
2014ರ ವಿಶ್ವಕಪ್ ಫುಟ್‌ಬಾಲ್‌ಗೆ ಬಳಸಲಾದ ಚೆಂಡು ಗಳನ್ನೂ ಸಿಯಾಲ್‌ಕೋಟ್‌ನಲ್ಲೇ ತಯಾರಿಸಲಾಗಿತ್ತು. ಫುಟ್ ಬಾಲ್ ತಯಾರಿಗಗೆ ಅಗತ್ಯವಿರುವ ಚರ್ಮ ವನ್ನು ಸಿಯಾಲ್‌ಕೋಟ್ ಸಮೀಪದ ಫಾರ್ಮ್ಗಳು ಪೂರೈಸುತ್ತವೆ.