ದುಪ್ಪಟ್ಟಾದರೂ ಪರವಾಗಿಲ್ಲ. ಊರಿಗೆ ಹೋಗಲು ಬಸ್ ಸಿಕ್ಕಿದರೆ ಸಾಕು ಎನ್ನುತ್ತಿರುವ ಪ್ರಯಾಣಿಕರು… ಇದು, ದಸರಾ ಹಬ್ಬದ ರಜೆಗೆ ಬೆಂಗಳೂರಿನಿಂದ ಸ್ವಂತ ಊರಿಗೆ ಹೊರಟು ನಿಂತಿರುವವರ ಗೋಳು. ಕಳೆದ ಹತ್ತು ಹದಿನೈದು ದಿನಗಳ
ಹಿಂದೆಯೇ ಬುಕ್ ಮಾಡಿದವರಿಗೆ ಟಿಕೆಟ್ ಸಿಕ್ಕಿದೆ. ತುರ್ತಾಗಿ ಮನೆಗೆ ಹೋಗಲು ಸಜ್ಜಾಗಿರುವ ಪ್ರಯಾಣಿಕರಿಗೆ ಬಸ್ ಸಿಗುತ್ತಿಲ್ಲ ಎಂಬ ತಲೆನೋವು ಆರಂಭವಾಗಿದೆ. ಈ ಮಧ್ಯೆ, ಹೆಚ್ಚುವರಿ ಬಸ್ ಗಳನ್ನೂ ಬಿಡಲಾಗಿದೆ. ಬುಕ್ಕಿಂಗ್ ಮಾಡಿಕೊಳ್ಳದೆ ಮೆಜೆಸ್ಟಿಕ್, ಯಶವಂತಪುರ, ಮೊದಲಾದ ಭಾಗದಿಂದ ತುರ್ತಾಗಿ ಊರಿಗೆ ಹೋಗುವವರಿಂದ ಬೇಕಾಬಿಟ್ಟಿ ದರ ವಸೂಲಿ ಮಾಡಲಾಗುತ್ತಿದೆ. ಇನ್ನೊಂದೆಡೆ ಟಿಕೆಟ್ ಮಾಡಲು ಕೌಂಟರ್‌ಗೆ, ಆನ್‌ಲೈನ್ ಸೈಟ್‌ಗೆ ಹೋದರೆ, ಟಿಕೆಟ್ ಸೋಲ್ಡ್ ಔಟ್ ಎಂಬ ಸಂದೇಶ ಬರುತ್ತಿದೆ. ಇದನ್ನೆ ಅವಕಾಶವಾಗಿ ಬಳಸಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಬಸ್ ಟಿಕೆಟ್ ದರ 850 ರೂ.ಇರುವುದನ್ನು 1,350-1,500ಕ್ಕೆ ಏರಿಸಿದ್ದಾರೆ. ಎಲ್ಲಾ ರೂಟ್‌ಗಳ
ಬಸ್ ದರಗಳೂ ಹೆಚ್ಚಿವೆ.
Advertisement
ಕೆಎಸ್‌ಆರ್‌ಟಿಸಿಯಿಂದ 1,500 ಹೆಚ್ಚುವರಿ ಬಸ್: ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಐರಾವತ, ಡೈಮಂಡ್ ಕ್ಲಾಸ್, ಕ್ಲಬ್‌ಕ್ಲಾಸ್, ರಾಜಹಂಸ, ಸ್ಲಿàಪರ್ ಕೋಚ್… ಹೀಗೆ ನಾನಾ ವರ್ಗದ ಬಸ್‌ಗಳ ಜತೆಗೆ ಸಾಮಾನ್ಯ ಬಸ್ ಸೇರಿ ಬೆಂಗಳೂರಿನಿಂದ ಮಂಗಳೂರು, ಮೈಸೂರು, ಕುಂದಾಪುರ, ಹುಬ್ಬಳ್ಳಿ, ರಾಯಚೂರು, ಬಳ್ಳಾರಿ, ಗೋಕರ್ಣ,ಮುರುಡೇಶ್ವರ, ಮಡಿಕೇರಿ, ಬೀದರ್, ಯಾದಗಿರಿ, ಧಾರವಾಡ…ಹೀಗೆ ರಾಜ್ಯದ ವಿವಿಧ ಭಾಗಕ್ಕೆ ಸುಮಾರು 3,500 ಬಸ್ ನಿತ್ಯ ಸಂಚಾರ ಮಾಡುತ್ತಿವೆ. ದಸರಾ ಹಬ್ಬದ ನಿಮಿತ್ತ ಊರಿಗೆ ಹೋಗುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್‌ಆರ್ ಟಿಸಿಯಿಂದ ಹೆಚ್ಚುವರಿಯಾಗಿ 1,500 ಬಸ್ ನಿಯೋಜನೆ ಮಾಡಲಾಗಿದೆ.