ಹೊಸಕೋಟೆ: ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಸ್ಪರ್ಧಿಸಲಿದ್ದು, ಜಯ ಗಳಿಸುವುದು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.ಕೋಲಾರಕ್ಕೆ ಬರ ಸಮೀಕ್ಷೆಗಾಗಿ ತೆರಳುವ ಮಾರ್ಗ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರವಾಸಿ ಮಂದಿರ ವೃತ್ತದಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದಿಂದಾಗಿ ಬಚ್ಚೇಗೌಡರು ಪರಾ ಭವಗೊಂಡಿದ್ದರು. ಆದರೆ, ಈ ಬಾರಿ ಗೆಲುವು ಸಾಧಿಸಲು ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯತಂತ್ರ ರೂಪಿಸಿ, ಪಕ್ಷದ ಮುಖಂಡರು, ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದರು.
ಕೇಂದ್ರ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಗಣನೀಯ ಸಾಧನೆ ಸಹ ಬಚ್ಚೇಗೌಡರಿಗೆ ವರದಾನ ವಾಗಲಿದೆ. ಮತ್ತೂಮ್ಮೆ ಅಧಿಕಾರ ಗಳಿಸುವುದು ಶತ:ಸಿದ್ಧ. ಕೆಲವು ಮಾಧ್ಯ ಮಗಳು ಚುನಾವಣೆ ಬಗ್ಗೆ ಪೂರ್ವ ಸಮೀಕ್ಷೆಗಳನ್ನು ಕೈಗೊಂಡಿರುವುದು ಕೇವಲ ಕಾಲ್ಪನಿಕ ಸಂಗತಿ. ಬರ ಪರಿಸ್ಥಿತಿ ಯನ್ನು ಸಮರ್ಪಕವಾಗಿ ನಿರ್ವಹಿಸು ವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು, ರೈತರ ಸಂಕಷ್ಟಗಳನ್ನು ಪರಿ ಹರಿಸುವ ಬದಲಿಗೆ ಅಧಿಕಾರಕ್ಕಾಗಿ ವೃಥಾ ಕಾಲಹರಣ ಮಾಡಲಾಗುತ್ತಿದೆ. ವಿನಾಕಾರಣ ಕೇಂದ್ರ ಸರಕಾರವನ್ನು ದೂಷಿ ಸಲಾಗುತ್ತಿದೆ ಎಂದು ದೂರಿದರು. ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶರತ್ ಬಚ್ಚೇಗೌಡ, ಮುಖಂಡರಾದ ವಿಜಯಕುಮಾರ್, ಸಿ.ಶ್ರೀನಿ ವಾಸಯ್ಯ, ಟಿ.ಎಸ್.ರಾಜಶೇಖರ್ ಇನ್ನಿತರರು ಭಾಗವಹಿಸಿದ್ದರು.