Advertisement

ಸೇತುವೆ ಅಡಿ ಆಫೀಸ್‌ ಕಟ್ಟಿಕೊಂಡ

08:10 AM Sep 10, 2017 | Harsha Rao |

ವಾಷಿಂಗ್ಟನ್‌: ಜಗತ್ತು “ಜಾಗ’ದ ಸಮಸ್ಯೆ ಎದುರಿಸುತ್ತಿದೆ. ಮನೆ ಕಟ್ಟೋಕೆ ಜಾಗ ಸಿಗುವುದು ಈಗ ತೀರಾ ಕಷ್ಟ. ಬೆಂಗಳೂರಿನಂಥ ಸಿಟಿಗಳಲ್ಲಂತೂ ಜಾಗವಿದ್ದರೂ ಬೆಲೆ ಕೇಳೇ ಬೆಚ್ಚಿಬೀಳಬೇಕು. ಆದರೆ ಇಂಥ ಜಾಗದ ಸಮಸ್ಯೆಗೆ ಸ್ಪೇನ್‌ನ ವ್ಯಾಲೆನ್ಸಿಯಾ ನಿವಾಸಿ ಫೆನ್ಯಾìಂಡೋ ಅಬೆಲ್ಲಾನಸ್‌ ಪರಿಹಾರ ಕಂಡುಕೊಂಡಿದ್ದಾರೆ. ಈ ಆಸಾಮಿ ದೊಡ್ಡ ಕಾಂಕ್ರೀಟ್‌ ಸೇತುವೆಯೊಂದರ ಕೆಳಗೆ ನೇತಾಡುವ ರೀತಿಯಲ್ಲಿ ಆಫೀಸ್‌ ಮಾಡಿಕೊಂಡಿದ್ದಾನೆ!

Advertisement

ಫೆನ್ಯಾìಂಡೋ ಸೇತುವೆ ಕೆಳಗೆ ಆಫೀಸ್‌ ಮಾಡಿದ್ದು ಬೇರೆಲ್ಲೂ ಜಾಗ ಸಿಗಲಿಲ್ಲ ಎಂದಲ್ಲ, ಬದಲಿಗೆ ಏನಾದರೂ ಹೊಸತನ್ನು ಮಾಡಿ ತೋರಿಸೋ ಉದ್ದೇಶದಿಂದ. ಮೊದಲು ಫ್ಲಂಬರ್‌ ಆಗಿದ್ದ ಫೆನ್ಯಾìಂಡೋ, ನಂತರ ತನ್ನ ಕೌಶಲ್ಯ ವೃದ್ಧಿಸಿಕೊಂಡು ಗೃಹ ವಿನ್ಯಾಸಕ ನಾಗಿ ಬೆಳೆದಿದ್ದಾನೆ. ಜೊತೆಗೆ ನಿರುಪಯುಕ್ತ ವಸ್ತುಗಳನ್ನು ಬಳಸಿ ಗೃಹೋಪಯೋಗಿ ವಸ್ತು, ನಿರ್ಮಿಸುವುದು ಮತ್ತು ಗೃಹ ವಿನ್ಯಾಸ ಮಾಡುವುದನ್ನು ಹವ್ಯಾಸ ಆಗಿಸಿಕೊಂಡಿದ್ದಾನೆ.

ಸೇತುವೆ ಕೆಳಗೆ ಆಫೀಸ್‌ ಮಾಡಿದ ಬಗ್ಗೆ ಕೇಳಿದರೆ, “ಒಳ್ಳೆ ಪರಿಸರದಲ್ಲಿ ಆಫೀಸ್‌ ಇದೆ. ಯಾರ ಕಿರಿಕಿರಿಯೂ ಇಲ್ಲ. ಕಾಂಕ್ರೀಟ್‌, ಇಟ್ಟಿಗೆ ಇಲ್ಲದ ಸಣ್ಣ ಕಟ್ಟಡದಲ್ಲಿ ನೆಮ್ಮದಿ ಜತೆಗೆ ಸೇತುವೆ ಕೆಳಗೆ ನಿಶ್ಶಬ್ಧವಿದೆ,’ ಎನ್ನುತ್ತಾನೆ ಫೆನ್ಯಾìಂಡೋ.

Advertisement

Udayavani is now on Telegram. Click here to join our channel and stay updated with the latest news.

Next