Advertisement

ಲೆಟರ್ ಮ್ಯಾನ್; 14 ಸಾವಿರ ಅಡಿ ಎತ್ತರದಲ್ಲಿ ಈತನೇ ಏಕೈಕ ಅಂಚೆಯಣ್ಣ

10:08 AM Apr 17, 2017 | |

ನಾಥುಲಾ (ಭಾರತ-ಚೀನ ಗಡಿ): ಭಾರತ ಮತ್ತು ಚೀನ ನಡುವೆ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಮಟ್ಟದಲ್ಲಿ ವಾಗ್ವಾದ ನಡೆಯುತ್ತಿರಬಹುದು. ಅದು ಯಾವುದೂ ಈ ವ್ಯಕ್ತಿಯ ಕೆಲಸಕ್ಕೇನೂ ತೊಂದರೆಯಾಗಿಲ್ಲ. ಅವರು 25 ವರ್ಷಗಳಿಂದ ಅಂಚೆಯಣ್ಣನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಕ್ಕಿಂನ 61 ವರ್ಷದ ಭೀಮ್‌ ಬಹದ್ದೂರ್‌ ತಮಂಗ್‌.

Advertisement

ತಮಂಗ್‌ ಪತ್ರ ತಲುಪಿಸುವ ಕೆಲಸ ಮಾಡುವುದು ಬರೋಬ್ಬರಿ 14,000 ಅಡಿ ಎತ್ತರದ ಹಿಮಾವೃತ ಪ್ರದೇಶದಲ್ಲಿ ಎಂಬುದು ಅಚ್ಚರಿಯ ಅಂಶ! ಸುಮಾರು 25 ವರ್ಷಗಳ ಕಾಲ ಪೋಸ್ಟ್‌ಮ್ಯಾನ್‌ ಆಗಿ ಸೇವೆ ಸಲ್ಲಿಸಿರುವ ಭೀಮ್‌ ಬಹದ್ದೂರ್‌ ತಮಂಗ್‌, ಇಳಿ ವಯಸ್ಸಿನಲ್ಲೂ ಹಿಮಾವೃತ ಗುಡ್ಡಗಾಡಿನ ದುರ್ಗಮ ಹಾದಿಯಲ್ಲಿ ಕ್ರಮಿಸಿ, 14 ಸಾವಿರ ಅಡಿ ಎತ್ತರದಲ್ಲಿರುವ ಭಾರತ-ಚೀನ ಗಡಿ ಪ್ರದೇಶ, ನಾಥು ಲಾ ತಲುಪಿ ಪತ್ರ ವಿನಿಮಯ ಮಾಡುತ್ತಾರೆ.

ಪ್ರತಿ ಗುರುವಾರ ಬೆಳಗ್ಗೆ ಪತ್ರಗಳ ಬ್ಯಾಗ್‌ ಹೆಗಲೇರಿಸಿಕೊಂಡು, ಸಾಮಾನ್ಯ ಉಡುಗೆ, ಮೇಲೊಂದು ಜಾಕೆಟ್‌, ಗಾಳಿಯಿಂದ ಕಿವಿಗಳನ್ನು ರಕ್ಷಿಸಲು ಟೋಪಿ ಧರಿಸಿ ಹೊರಡುವ ತಮಂಗ್‌, ಬೆಳಗ್ಗೆ 8.30ಕ್ಕೆ ಭಾರತದ ಗಡಿ ಮೂಲಕ ತೆರಳಿ, ಚೀನದ ಗಡಿ ಪ್ರವೇಶಿಸಿ, ಚೀನ ಭಾಗದಲ್ಲಿರುವ ವ್ಯಕ್ತಿಯೊಂದಿಗೆ ಪತ್ರದ ಚೀಲ ವಿನಿಮಯ ಮಾಡಿ ಕೊಂಡು ಹಿಂದಿರುಗುತ್ತಾರೆ. ಈ ಕೆಲಸವನ್ನ ಎರಡೂ ದೇಶಗಳ ಅನುಮತಿ ಪಡೆದೇ ಮಾಡುತ್ತಿರುವ ತಮಂಗ್‌, ಚಳಿಗಾಲದಲ್ಲಿ – 20 ಡಿ. ಸೆ. ಕೊರೆವ ಚಳಿ ಇದ್ದರೂ ಕರ್ತವ್ಯ ಮರೆಯುವುದಿಲ್ಲ. ಮಾತ್ರವಲ್ಲ “ಇದೊಂದು ಸಣ್ಣ ಪ್ರಕ್ರಿಯೆ’ ಎನ್ನುತ್ತಾರೆ!

Advertisement

Udayavani is now on Telegram. Click here to join our channel and stay updated with the latest news.

Next